

ಅಥಣಿ ಗ್ರಾಮೀಣ: ಯುವಜನರು ಗ್ರಾಮೀಣ ಕ್ರೀಡೆಗಳನ್ನು ಬೆಳೆಸಲು ಮುಂದಾಗಬೇಕು ಎಂದು ಯುವ ಮುಖಂಡ ಚಿದಾನಂದ ಸವದಿ ಕರೆ ನೀಡಿದರು.
ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಸಂಗಮೇಶ್ವರ ಜಾತ್ರೆ ನಿಮಿತ್ತ ಮಂಗಳವಾರ ಹೊನಲು ಬೆಳಕಿನ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡಾಪಟುಗಳು ಸೋಲು-ಗೆಲುವು ಸವಾಲಾಗಿ ಸ್ವೀಕರಿಸಿ ಭವಿಷ್ಯದಲ್ಲಿ ಗೆಲುವು ಪಡೆಯುವತ್ತ ಗಮನ ಹರಿಸಬೇಕು. ಕುಸ್ತಿ ಪಂದ್ಯಾವಳಿ ಏರ್ಪಡಿಸಿದ್ದು ಶ್ಲಾಘನೀಯ ಎಂದರು.
ಕಕಮರಿಯ ಆತ್ಮಾರಾಮ ಸ್ವಾಮೀಜಿ ಮಾತನಾಡಿ, ಯುವಜನರು ಜಿಮ್ ಬದಲು ಕುಸ್ತಿ ಆಡುವ ಹವ್ಯಾಸ ಬೆಳೆಸಿಕೊಂಡರೆ ಸ್ವಾಸ್ತ್ಯ ಹೆಚ್ಚುತ್ತದೆ ಎಂದರು.
ಮುಖಂಡರಾದ ಶೇಖರ ನೇಮಗೌಡ, ಅಡಿವೆಪ್ಪ ಕೆಂಚಣ್ಣವರ, ಕೆಎಎಸ್ ಅಧಿಕಾರಿ ಮಲಗೌಡ ಝೇರೆ, ಸದಾಶಿವ ಹರಪಾಳೆ, ಶಿವು ಗುಡ್ಡಾಪುರ, ಶಾಮು ಕುಂಬಾರ, ಶಂಕರಯ್ಯ ಹಿರೇಮಠ, ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ, ಪಿಎಸ್‌ಐ ಚಂದ್ರಶೇಖರ ಸಾಗನೂರ, ಗ್ರಾಪಂ ಅಧ್ಯಕ್ಷೆ ಬಬಿತಾ ಮರಗಾಳೆ, ತುಕಾರಾಮ ದೇವಖಾತೆ, ಸಮಿತಿ ಅಧ್ಯಕ್ಷ ಸುನೀಲಗೌಡ ಝೇರೆ, ಸಿದರಾಯ ನಾಯಿಕ, ಉಮಯ್ಯ ಪೂಜಾರಿ, ಪ್ರಲ್ಹಾದ ಪಾಟೀಲ, ಜಯವಂತರಾವ ದೇಸಾಯಿ, ಮಹಾದೇವಗೌಡ ಬಿರಾದಾರ ಇತರರಿದ್ದರು.