ಆಟೋಟಗಳಲ್ಲಿ ಭಾಗವಹಿಸಲಿ

4
ಹೊಸೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಿಡಕಲ್ ಡ್ಯಾಂ ವಲಯಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಬಿಇಒ ಪ್ರಭಾವತಿ ಪಾಟೀಲ ಚಾಲನೆ ನೀಡಿದರು. ಆರ್.ಎಂ.ಶೆಟ್ಟಿಮನಿ, ಬಿ.ಬಿ.ಪಾಟೀಲ, ಬಾಹುಬಲಿ ನಾಗನೂರಿ ಇತರರಿದ್ದರು.
Published on

ಹುಕ್ಕೇರಿ: ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಹೇಳಿದರು.

ತಾಲೂಕಿನ ಹೊಸೂರ ಗ್ರಾಮದ ದಿ. ಅಕ್ಕಪ್ಪ ಸಿದ್ದಪ್ಪ ನಾಯಿಕ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಹಿಡಕಲ್ ಡ್ಯಾಂ ವಲಯಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಮಾತನಾಡಿದರು.

ಸೋಲು-ಗೆಲುವಿಗಿಂತ ಕ್ರೀಡಾ ಮನೋಭಾವದಿಂದ ಭಾಗವಹಿಸುವುದು ಮುಖ್ಯ ಎಂದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆರ್.ಎಂ.ಶೆಟ್ಟಿಮನಿ ಚಾಲನೆ ನೀಡಿದರು.

ಮುಖ್ಯ ಶಿಕ್ಷಕಿ ಎ.ವಿ. ಕುರಣಿ, ಗ್ರಾಮದ ಮುಖಂಡರಾದ ಬಿ.ಬಿ.ಪಾಟೀಲ, ಬಾಹುಬಲಿ ನಾಗನೂರಿ, ದೈಹಿಕ ಶಿಕ್ಷಣ ಶಿಕ್ಷಕಿ ಎಂ.ಪಾಟೀಲ, ರಮೇಶ ಕಾಂಬಳೆ ಎಸ್‌ಡಿಎಂಸಿ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net