ಉದ್ಯೋಗ ಮೇಳದ ಲಾಭ ಪಡೆಯಲಿ

3Rayabag3
Published on

ರಾಯಬಾಗ: ವಿದ್ಯಾರ್ಥಿಗಳು ಮತ್ತು ಯುವಕರು ಗ್ರಾಮೀಣ ಭಾಗದಲ್ಲಿ ಜರುಗುವ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ ಸಂಸ್ಥೆಯ ಯಶಿತಾ ಹೇಳಿದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಮಲಗೌಡ ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ದೇಶಪಾಂಡೆ ಸ್ಕಿಲ್ಲಿಂಗ್ ವತಿಯಿಂದ ಯುವಕರಿಗೆ ವಿವಿಧ ಕೌಶಲ ತರಬೇತಿ ಆಯೋಜಿಸಲಾಗುತ್ತಿದೆ ಎಂದರು.

ಉದ್ಯೋಗ ಮೇಳದಲ್ಲಿ ಭಾರತೀಯ ಬ್ಯಾಂಕೇತರ ಪ್ರತಿಷ್ಠಿತ ಕಂಪನಿಯಾದ ಕ್ರೇಜಿಬಿ ಕಂಪನಿಯು ವಿವಿಧ ಪದವಿ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳಿಗೆ ಟೆಲಿಸೆಲ್ಸ್ ಮತ್ತು ಕಲೆಕ್ಷನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಸಂದರ್ಶನ ಜರುಗಿತು. ಉದ್ಯೋಗ ಮೇಳದಲ್ಲಿ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ವಿವಿಧ ಮಹಾವಿದ್ಯಾಲಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಚಾರ್ಯ ಡಾ.ಆರ್.ಕೆ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.  ಆಶಾ ಹನ್ನಾ, ಸುನೀಲ ಕಮ್ಮಾರ, ರಾಘವೇಂದ್ರ ಪವಾರ, ಪ್ರೊ.ಆನಂದ ಉಮದಿ, ಪ್ರೊ.ಎಂ.ಎಸ್.ಹಂಜೆ ಹಾಗೂ ವಿದ್ಯಾರ್ಥಿಗಳು ಇತರರಿದ್ದರು. ನಿಕಿತಾ ಹಿರೇಮಠ ನಿರೂಪಿಸಿದರು. ಚೈತ್ರಾ ಚೌಗಲೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net