ಮೈಸೂರು: ಒಳ ಮೀಸಲಾರಿ ಜಾರಿ ವೇಳೆ ರಾಜ್ಯ ಸರ್ಕಾರ ಸಂಬಂಧಿತ ಜಾತಿಗಳ ಔದ್ಯೋಗಿಕ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತ ಇತ್ತೀಚಿನ ಸ್ಥಿತಿಗತಿ ಸಮೀಕ್ಷೆ ನಡೆಸಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ದಾಸಯ್ಯ ಅಭಿಪ್ರಾಯಪಟ್ಟರು.
ಸುಪ್ರೀಂಕೋರ್ಟ್ ತೀರ್ಪಿನ ಮಾನದಂಡದಂತೆ ಪರಿಶಿಷ್ಟ ಜಾತಿಯಲ್ಲಿ ಬರುವ ಉಪ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗದ ಬಗ್ಗೆ ಖಚಿತ ಅಂಕಿ-ಅಂಶಗಳನ್ನೊಳಗೊಂಡ ವರದಿ ಆಧಾರದ ಮೇಲೆ ರಾಜ್ಯ ಸರ್ಕಾರ ನ್ಯಾಯಯುತ ವರ್ಗೀಕರಣ ಮಾಡಬೇಕು. ವರ್ಗೀಕರಣ ನ್ಯಾಯಯುತ, ಅಗತ್ಯ, ಪೂರ್ಣ ಅಂಕಿ-ಅಂಶಗಳನ್ನು ಒಳಗೊಂಡಿರಬೇಕೆಂದು ತಿಳಿಸಿದೆ. ಹೀಗಾಗಿ ಇದನ್ನು ಪಾಲಿಸಬೇಕು. ಇತ್ತೀಚೆೆಗೆ ಜನಗಣತಿ ನಡೆದಿಲ್ಲ. ಈಗ ರಾಜ್ಯ ಸರ್ಕಾರ ಪಡೆದಿರುವ ಜಾತಿಗಣತಿ ವರದಿ ಸಹ ಪೂರ್ಣ ಮಾಹಿತಿ ಒಳಗೊಂಡಿಲ್ಲ. ಕೂಡಲೇ ರಾಜ್ಯಾದ್ಯಂತ ಅಂಕಿ-ಅಂಶ ಸಂಗ್ರಹಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಸಿಂಧುವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಉಮಾಪತಿ ಇತರರು ಇದ್ದರು.