ದೂರದೃಷ್ಟಿ ಹೊಂದಿರುವ ನಾಯಕನನ್ನು ಬೆಂಬಲಿಸೋಣ - ಜಯಬಸವ ಕುಮಾರ ಸ್ವಾಮೀಜಿ ಅಭಿಮತ

Let's support a visionary leader
ವಿಜಯಪುರ ನಗರದಲ್ಲಿ ನಡೆದ ಮಲ್ಲಿಕಾರ್ಜುನ ಎಸ್. ಲೋಣಿ ಬೆಂಬಲಿಗರ ಸಭೆಯಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಮಾತನಾಡಿದರು. ಉದ್ಯಮಿ ಶರಣಬಸು ಅರಕೇರಿ, ರಾಮನಿಂಗ ಬಿರಾದಾರ, ರೂಗಿಯ ಸುಗಲಮ್ಮ ತಾಯಿ, ಜಗದೀಶ ಪಾಟೀಲ, ಪರಮಾನಂದ ಬಗಲಿ ಇತರರಿದ್ದರು.
Published on

ವಿಜಯಪುರ: ವ್ಯಕ್ತಿಯನ್ನು ಜಾತಿಯಿಂದ ನೋಡದೆ ಅಭಿವೃದ್ಧಿ ಮತ್ತು ದೂರದೃಷ್ಟಿ ಹೊಂದಿರುವ ನಾಯಕರಿಗೆ ಎಲ್ಲ ಸಮುದಾಯ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಜಯಬಸವ ಕುಮಾರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಬುಧವಾರ ಮಲ್ಲಿಕಾರ್ಜುನ ಎಸ್. ಲೋಣಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಜಾತ್ಯತೀತ ನಾಯಕರನ್ನು ಉನ್ನತ ಸ್ಥಾನಕ್ಕೇರಿಸಲು ಎಲ್ಲರೂ ಕೈಜೋಡಿಸೋಣ. ಎಂ.ಬಿ. ಪಾಟೀಲರು ಹೃದಯ ವೈಶಾಲ್ಯತೆ ಹೊಂದಿದ್ದು, ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನಜನಿತವಾಗಿದೆ. ಸಂಗಾಪುರ ಎಸ್.ಎಚ್. ಗ್ರಾಮದಲ್ಲಿ ರೈತರು ಅವರ ಪುತ್ಥಳಿ ಸ್ಥಾಪಿಸಿರುವುದು ಇದಕ್ಕೆ ಸಾಕ್ಷಿ ಎಂದರು.

ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್ ಸರಕಾರದಲ್ಲಿ ಎಂ.ಬಿ. ಪಾಟೀಲರು ಪ್ರಮುಖ ಸ್ಥಾನದಲ್ಲಿರುತ್ತಾರೆ ಎಂದರು.

ಶಾಸಕ ಎಂ.ಬಿ. ಪಾಟೀಲರ ದೂದೃಷ್ಟಿ ಪರಿಣಾಮ ಗುಡ್ಡಗಾಡು ಪ್ರದೇಶದಲ್ಲಿ ಜಲ ಸಮೃದ್ಧಿ ನೆಲೆಸಿದ್ದು ವಿವಿಧ ಜೀವವಿಕಾಸಕ್ಕೆ ಕಾರಣವಾಗಿದೆ. ಅವರ ತಂದೆ ಶೈಕ್ಷಣಿಕ ಕ್ರಾಂತಿ ಮಾಡಿದ್ದರೆ, ಇವರು ಜಲಕ್ರಾಂತಿಯನ್ನೇ ಮಾಡಿದ್ದಾರೆ. ಕ್ಷೇತ್ರದಲ್ಲಿ ಅಂತರ್ಜಲ ಹೆಚ್ಚಿದ್ದು ಬೋರ್‌ವೆಲ್‌ನಲ್ಲೂ ಅಧಿಕ ನೀರಿದೆ ಎಂದು ಉದ್ಯಮಿ ಶರಣಬಸು ಅರಕೇರಿ, ರಾಮನಿಂಗ ಬಿರಾದಾರ ಹೇಳಿದರು.

ರೂಗಿಯ ಸುಗಲಮ್ಮ ತಾಯಿ, ಜಗದೀಶ ಪಾಟೀಲ, ಪರಮಾನಂದ ಬಗಲಿ, ಎನ್.ಎಸ್. ಲೋಣಿ, ಬಿ.ಎಂ. ಪಾಟೀಲ ಕತ್ನಳ್ಳಿ, ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಮಾಜಿ ಉಪಾಧ್ಯಕ್ಷ ಬಾಬು ಸಾಹುಕಾರ ಮೇತ್ರಿ, ಮುಖಂಡರಾದ ಬಿ.ಪಿ. ಪಾಸೋಡಿ, ಬಾಗೀರಥಿ ತೇಲಿ ಇತರರಿದ್ದರು.

ಬಸವಣ್ಣನವರು ಮತ್ತು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ತತ್ವಾದರ್ಶಗಳಡಿ ಕೆಲಸ ಮಾಡುತ್ತಿದ್ದೇನೆ. ನಾನು ಅಧಿಕಾರದಲ್ಲಿದ್ದಾಗ ಸರ್ವ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಎಲ್ಲ ಸಮುದಾಯಗಳ ಹಿತ ಕಾಪಾಡುತ್ತಿದ್ದೇನೆ. ಎಂ.ಬಿ. ಪಾಟೀಲ, ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ

ಎಂ.ಬಿ. ಪಾಟೀಲ, ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net