ಹೆಚ್ಚು ಕಬ್ಬು ಪೂರೈಸಲಿ

15Manjari1
Published on

ಚಿಕ್ಕೋಡಿ: ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ರೂವಾರಿಗಳಾದ ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ಮತ್ತು ಅಮಿತ್​ ಕೋರೆ ಅವರ ಮುಂದಾಳತ್ವದಲ್ಲಿ ಹಾಗೂ ಆಡಳಿತ ಮಂಡಳಿ ಸೂಕ್ತ ರ್ನಿಣಯದಿಂದ ಕಾರ್ಖಾನೆ ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.

ಇಲ್ಲಿನ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ತೂಕದ ಯಂತ್ರ ಮತ್ತು ಕೇನ್​ ಕ್ಯಾರಿಯರ್​ಗೆ ಪೂಜೆ ಸಲ್ಲಿಸಿ ಮಾತನಾಡಿ, ರೈತರು ಕಾರ್ಖಾನೆಗೆ ಕಬ್ಬು ಪೂರೈಸಿ ಕಾರ್ಖಾನೆ ಪ್ರಗತಿಗೆ ಶ್ರಮಿಸಬೇಕು ಎಂದರು. ಕಾರ್ಖಾನೆ ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು ಕಡಿಮೆ ಅವಧಿಯಲ್ಲಿ ಹೆಚ್ಚು ಕಬ್ಬು ನುರಿಸಿ ಹೆಚ್ಚು ಸಕ್ಕರೆ ಉತ್ಪಾದನೆಗೆ ಕ್ರಮ ಕೈಗೊಳ್ಳುವ ಮೂಲಕ ಕಬ್ಬು ನುರಿಸುವ ಗುರಿ ತಲುಪಬೇಕು ಎಂದರು.

ರೈತ ಸದಸ್ಯರಾದ ಮಲಕಾರಿ, ಯಡ್ರಾಂವೆ ದಂಪತಿ ಕ್ಯಾರಿಯರ್​ ಪೂಜೆ ಮಾಡಿದರು. ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ಸಂಚಾಲಕರಾದ ಅಜಿತ್​ ದೇಸಾಯಿ, ಭರತೇಶ ಬನವಣೆ, ಪರಸಗೌಡ ಪಾಟೀಲ, ಸಂದೀಪ ಪಾಟೀಲ, ಮಹಾವೀರ ಮಿರ್ಜಿ, ಮಲ್ಲಪ್ಪ ಮೈಶಾಳೆ, ಚೇತನ ಪಾಟೀಲ, ಭೀಮಗೌಡ ಪಾಟೀಲ, ಮಹಾವೀರ ಕಾತ್ರಾಳೆ, ಅಣ್ಣಾಸಾಹೇಬ ಇಂಗಳೆ, ವ್ಯವಸ್ಥಾಪಕ ನಿರ್ದೇಶಕ ಡಾ.ಆರ್​.ಬಿ.ಖಾಂಡಗಾವೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net