ಉಜ್ವಲ ಭವಿಷ್ಯಕ್ಕೆ ಹೆಚ್ಚು ಅಧ್ಯಯನ ಮಾಡಲಿ

Menasagi
Published on

ಮೆಣಸಗಿ: ಎಸ್ಸೆಸ್ಸೆಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ಮುರಾರ್ಜಿ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಶ್ರೀಫಲಹಾರ ಶಿವಯೋಗೇಶ್ವರ ಭಜನಾ ಮಂಡಳಿ ಮತ್ತು ಯುವಕ ಮಂಡಳಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪನ್ಯಾಸಕ ವಿಶ್ವನಾಥ ಪಿ. ಪಾಟೀಲ, ಇಷ್ಟಪಟ್ಟು ಹಾಗೂ ಶ್ರಮಪಟ್ಟು ಓದಿದರೆ ಏನನ್ನಾದರೂ ಸಾಧಿಸಬಹುದು. ಉಜ್ವಲ ಭವಿಷ್ಯಕ್ಕೆ ಹೆಚ್ಚು ಅಧ್ಯಯನ ಮಾಡಬೇಕು. ಟಿವಿ ಹಾಗೂ ಮೊಬೈಲ್‌ಫೋನ್‌ನಿಂದ ದೂರವಿರಬೇಕು ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಜಯಲಕ್ಷ್ಮೀ ಹೆಬ್ಬಳ್ಳಿ, ಅಭಿಷೇಕ ಕಪ್ಪಲಿ, ವೆಂಕಟೇಶ ಬಾಣದ, ವಿದ್ಯಾಶ್ರೀ ಮುದೇನೂರ, ಚೈತ್ರಾ ಕಳ್ಳಿಮನಿ, ಗೀತಾ ಫಕೀರಗೌಡ್ರ, ಸಹನಾ ತೋಟದ, ಭಾರತಿ ಕ್ಯಾಮನಗೌಡ,್ರ ಪ್ರಮೋದ ಹಾದಿಮನಿ, ವಿನಾಯಕ ಕಟ್ಟೆನ್ನವರ, ಈರಣಗೌಡ ಸಂಕನಗೌಡ್ರ, ಕಾಲೇಜು ವಿದ್ಯಾರ್ಥಿಗಳಾದ ಸಹನಾ ಹೊಸಮಠ, ಸಂಜನಾ ನನ್ನೂರ, ರೇಖಾ ಕರ್ಕಿಕಟ್ಟಿ, ಸೌಮ್ಯಾ ಬೆಂಡಿಗೇರಿಮಠ, ಸಂಜನಾ ಕುಲಕರ್ಣಿ, ಭಾಗ್ಯಶ್ರೀ ಮುದೇನೂರ, ಮಾಂತೇಶ ಮುದೇನೂರ, ರಕ್ಷಿತಾ ಕ್ಯಾಮನಗೌಡ್ರ, ರೇಣುಕಾ ಮಡಿವಾಳರ ಹಾಗೂ ಮುರಾರ್ಜಿ ಶಾಲೆಗೆ ಆಯ್ಕೆಯಾದ ಸಹನಾ ಸುಭಾಸ ಪಲ್ಲೇದ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಶಿರಸ್ತೇದಾರ್ ನರಗುಂದ ಅಂದಾನಗೌಡ ಪಾಟೀಲ, ಡಾ.ಮಾಂತೇಶ ಬೇಂಡಗೇರಿಮಠ, ಬೀರಪ್ಪ ಕಟ್ಟೆಕಾರ, ಈರಪ್ಪ ಬಾಣದ, ಶಂಕ್ರಪ್ಪ ಯಲಿಗಾರ, ಫಕೀರಗೌಡ್ರ ಕ್ಯಾಮನಗೌಡ್ರ, ದುಂಡಿಬಾಯಿ ಜಾಧವ, ಈರಪ್ಪ ಸರ್ವಿ, ಮುತ್ತನಗೌಡ ಫಕೀರಗೌಡ್ರ, ಅಶೋಕ ಹೆಬ್ಬಳ್ಳಿ, ಕೇದರಗೌಡ ಮಲ್ಲಪ್ಪ, ಮುದೇನೂರ ಸುರೇಶ, ಮೀನಾಕ್ಷಿ ಯಲಿಗಾರ, ಯಲ್ಲವ್ವ ಜಾಮನಕಟ್ಟಿ, ಸವಿತಾ ಬೆಂಡಿಗೇರಿಮಠ, ಭೀಮಸಿ ಕಪ್ಪಲಿ, ಯಲ್ಲಪ್ಪ ಜಾಮಕಟ್ಟಿ, ನಿಂಗಪ್ಪ ಮುದೇನೂರ, ಪ್ರವೀಣ ಕುಲಕರ್ಣಿ, ಅಂದಾನಪ್ಪ ಮಾಸ್ತರ, ಬಾಣದ ಮುತ್ತಪ್ಪ ಮಲ್ಲಪ್ಪನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net