

ಸಿರವಾರ: ಲಕ್ಷಾಂತರ ಜನರ ತ್ಯಾಗ ಬಲಿದಾನದಿಂದ ದೊರೆತ ಸ್ವಾತಂತ್ರೃ ದಿನವನ್ನು ಎಲ್ಲರೂ ಹಬ್ಬದಂತೆ ಆಚರಿಸಬೇಕು ಎಂದು ತಹಸೀಲ್ದಾರ್ ರವಿ ಅಂಗಡಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಸ್ವಾತಂತ್ರೊೃೀತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಭಾರತದ ಪ್ರಗತಿಗಾಗಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ದೇಶದ ಪರಂಪರೆ ಉಳಿಸಲು ಶ್ರಮಿಸಬೇಕು ಎಂದರು.
ಇದನ್ನೂ ಓದಿ: ದೇಶದ ಪರಂಪರೆ ಉಳಿಸಿ ಬೆಳೆಸೋಣ
ಶಾಲಾ ಮಕ್ಕಳಿಂದ ನೃತ್ಯ, ಕರಾಟೆ, ಯೋಗ ಪ್ರದರ್ಶನ, ಕೋಲಾಟ, ದೇಶಭಕ್ತಿ ಗೀತೆಗೆ ನೃತ್ಯ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಿಪಿಐ ಶಶಿಕಾಂತ್ ಎಂ, ಪಿಎಸ್‌ಐ ಗುರುಚಂದ್ರ ಯಾದವ್, ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ, ಸಿಡಿಪಿಒ ನಾಗರತ್ನಾ, ನೀರಾವರಿ ಇಲಾಖೆ ಎಇಇ ವಿಜಯಲಕ್ಷ್ಮೀ ಪಾಟೀಲ್ ಇದ್ದರು.