ಸಂಸ್ಕೃತಿ ವಿನೂತನವಾಗಿಸಲು ಶ್ರಮಿಸಲಿ

9blh4-kajaap photo
filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 44;
Published on

ಬೈಲಹೊಂಗಲ: ಜಾನಪದ ಸಾಹಿತ್ಯ ವಿಶ್ವ ಸಾಹಿತ್ಯವಾಗಿದ್ದು, ಇದನ್ನು ವಿನೂತನವಾಗಿಸಬೇಕು ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಜಾನಪದ ಬಾಲಾಜಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ತಿನ ತಾಲೂಕು ಘಟಕ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕನ್ನಡ ಜಾನಪದ ಪರಿಷತ್ ದಶಮಾನೋತ್ಸವ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಜಾನಪದ ಕ್ಷೇತ್ರದಲ್ಲಿ ಬಗೆದಷ್ಟು ಸಾಹಿತ್ಯ ಹೊರ ಬರಲಿದೆ. ಸದಾ ಸಮಾಜದ ಆಗು-ಹೋಗುಗಳನ್ನು ಮನಗಂಡು ಅಧ್ಯಯನಶೀಲರಾಗಿ ಉತ್ತಮ ಸಾಹಿತ್ಯ ರಚಿಸಿದಲ್ಲಿ ಗೌರವ ಮೂಡಲು ಸಾಧ್ಯವಾಗುತ್ತದೆ ಎಂದರು.

ಕಲಾವಿದರಾದ ನೂರುದ್ದೀನ್ ಗೋರೇಖಾನ್, ಯಲ್ಲಪ್ಪ ಭಜಂತ್ರಿ, ಪತ್ರೆಮ್ಮ ವಿರಕ್ತಮಠ, ಮಲ್ಲಿಕಾರ್ಜುನ ನಿಚ್ಚಣಿ, ಆನಂದ ಕುಂಬಾರ, ಮಂಜುನಾಥ ಹಿಪ್ಪರಗಿ, ನಾಗಪ್ಪ ಹುಡೇದ, ಮಹಾಂತೇಶ ಕೊಪ್ಪದ ಅವರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ಬಿ.ಕೆ.ಮದವಾಲ, ಪ್ರೊ.ಕೆ.ಎಸ್.ಕೌಜಲಗಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮೋಹನ ಪಾಟೀಲ, ಕಜಾಪ ಜಿಲ್ಲಾಧ್ಯಕ್ಷ ಮೋಹನ ಗುಂಡ್ಲೂರ, ಸಂಘಟನೆ ತಾಲೂಕಾಧ್ಯಕ್ಷ ಚಂದ್ರಶೇಖರ ಕೊಪ್ಪದ, ಉಪಾಧ್ಯಕ್ಷ ರಫಿಕ್ ಬಡಿಗೇರ, ಕಸಾಪ ತಾಲೂಕಾಧ್ಯಕ್ಷ ಎನ್.ಆರ್.ತಕ್ಕಾಯಿ, ಮಲ್ಲಿಕಾರ್ಜುನ ಕೋಳಿ, ಮಹಾಬಳೇಶ್ವರ ವಾಲಿ, ಮಹಾಂತೇಶ ರಾಜಗೋಳಿ, ಮಾರುತಿಗೌಡ ಇತಾರಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net