

ಸೇಡಂ: ದೇಶದಲ್ಲಿ ಅನೇಕ ಆಚರಣೆಗಳ ಮಧ್ಯೆ ನಾವು ಜೀವನ ನಡೆಸುತ್ತಿz್ದೆÃವೆ. ಕೆಲ ಅನಿಷ್ಠ ಆಚರಣೆಗಳಿಂದ ಹೊರ ಬರುವ ಮೂಲಕ ಸಮ ಸಮಾಜದ ಬದುಕಿಗೆ ನಾವೆಲ್ಲ ಅಪ್ಪಿಕೊಳ್ಳಬೇಕಾಗಿದೆ ಎಂದು ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಬ್ರಹ್ಮಕುಮಾರಿಸ್ ರಾಜಯೋಗ ಶಿಕ್ಷಣ ಕೇಂದ್ರದಲ್ಲಿ ಸಂಸ್ಕೃತಿ ಪ್ರಕಾಶನ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದಿAದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಜಗನ್ನಾಥ ತರನಳ್ಳಿ ಅವರ ಒಂದು ದಿನದ ಬ್ರಾಹ್ಮಣ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಕೆಲ ಕಡೆಗಳಲ್ಲಿ ದೇವರ ಹೆಸರಿನಲ್ಲಿ ಹೆಣ್ಣನ್ನು ಶೋಷಣೆ ಮಾಡಲಾಗುತ್ತಿತ್ತು. ಹೆಣ್ಣನ್ನು ತಾಯಿಯ ರೂಪದಲ್ಲಿ ನೋಡುವ ಗುಣ ಬೆಳೆಸಿಕೊಳ್ಳಬೇಕು. ಹುಟ್ಟಿನಿಂದ ಯಾರು ಮೇಲಲ್ಲ, ಕೀಳಲ್ಲ, ಹೀಗಾಗಿ ಎಲ್ಲರೂ ಒಂದೇ ಎಂಬ ಭಾವನೆ ಬರಬೇಕಿದೆ ಎಂದರು.
ರಾಜಯೋಗಿನಿ ಬ್ರಹ್ಮಕುಮಾರಿ ಕಲಾವತಿ ಅಕ್ಕ ಮಾತನಾಡಿ, ಮನುಷ್ಯನ ಬದಲಾವಣೆಗೆ ಸಾಹಿತ್ಯ ಸಹಕಾರಿಯಾಗಿದೆ. ಮನಸ್ಸಿನ ಚಂಚಲತೆಯ ಬಗ್ಗೆ ಅನೇಕ ಸಾಹಿತ್ಯಗಳು ಸಿಗುತ್ತವೆ. ಸಕಾರಾತ್ಮಕ ಚಿಂತನೆಗಳಿAದ ಮನುಷ್ಯ ಸಮೃದ್ಧನಾಗುತ್ತಾನೆ ಎಂದು ಹೇಳಿದರು.
ಸಾಹಿತಿ ಸಿದ್ಧರಾಮ ಹೊನಕಲ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಲ್ಲನಗೌಡ ಬೆನಕನಹಳ್ಳಿ, ನ್ಯಾಯವಾದಿ ನಾಗೇಶ ಕೊಳ್ಳಿ ಮಾತನಾಡಿದರು. ದಾಸಧೇನು ಟ್ರಸ್ಟ್ ಅಧ್ಯಕ್ಷ ಡಾ.ವಾಸುದೇವ ಅಗ್ನಿಹೋತ್ರಿ ಅಧ್ಯಕ್ಷತೆವಹಿಸಿದ್ದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಕೃತಿ ಪರಿಚಯ ಮಾಡಿದರು. ಅಂಜನಾದೇವಿ ಭೋವಿ ಪ್ರಾರ್ಥಿಸಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಾಗಾಂವ್ ಸ್ವಾಗತಿಸಿದರು. ಸಾಹಿತಿ ಸಂತೋಷಕುಮಾರ ತೊಟ್ನಳ್ಳಿ ನಿರೂಪಣೆ ಮಾಡಿದರು. ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಜೋಶಿ ವಂದಿಸಿದರು.