ರಾಜನಹಳ್ಳಿ ವಾಲ್ಮೀಕಿ ಜಾತ್ರೆ ಯಶಸ್ಸಿಗೆ ಶ್ರಮಿಸಲಿ

KND VALMIKI JATRE
Published on

ಕುಂದಗೋಳ: ಶೋಷಿತ ವಾಲ್ಮೀಕಿ ನಾಯಕ ಸಮುದಾಯವನ್ನು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸಂಘಟಿಸಿ ಸರ್ವಾಂಗೀಣ ಅಭಿವೃದ್ಧಿಗೊಳಿಸುವ ಆಶಯದೊಂದಿಗೆ ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ವತಿಯಿಂದ 2025ರ ಫೆಬ್ರವರಿ 8 ಹಾಗೂ 9ರಂದು ನಡೆಯಲಿರುವ ವಾಲ್ಮೀಕಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮೀಜಿಗಳು ಕರೆ ನೀಡಿದರು.

ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಾತ್ರಾ ಸಿದ್ಧತೆಯ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ವಾಲ್ಮೀಕಿ ಸಮಾಜವನ್ನು ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯವಾಗಿ ಜಾಗೃತಿಗೊಳಿಸಿ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಅಶಕ್ತರು, ಅಸಹಾಯಕರಿಗೆ ನೆರವಾಗಬೇಕು ಎಂದರು.

ರಾಜು ದೊಡ್ಡಶಂಕರ, ರವಿ ದೊಡ್ಡಮನಿ, ರಾಜೀವ ಪುಟ್ಟಣ್ಣನವರ, ಬಸವರಾಜ ಗೋವಿಂದಪ್ಪನವರ, ಶಂಕ್ರಣ್ಣ ಹಿತ್ತಲಮನಿ, ಅಡಿವೆಪ್ಪ ಹೆಬಸೂರ, ಈರಣ್ಣ ಗೌಡನಾಯ್ಕರ, ಶಿವಾನಂದ ನಾಯ್ಕರ್, ರೇಣುಕ ಎಂ. ಮಲ್ಲಾಪುರ, ದ್ಯಾವಪ್ಪ ಫ. ಡೊಳ್ಳಿನ, ಡಾ.ತ್ಯಾಗರಾಜ್, ಜಿ.ಎನ್. ಕೂಬಿಹಾಳ, ಡಾ.ದೊಡ್ಡಮನಿ, ಇತರರು ಸಭೆಯಲ್ಲಿದ್ದರು. ಬಸವರಾಜ ಕೆ. ನಾಯ್ಕರ್ ಹಾಗೂ ವಿರೂಪಾಕ್ಷ ಎನ್. ಸುಂಕದ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net