

ಇಟಗಿ: ಇಲ್ಲಿನ ಜನತಾ ಶಿಣ ಪ್ರಸಾರ ಸಮಿತಿಯ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿ ಪೂರ್ವ ಮತ್ತು ಬಿಎಂ ಸಾಣಿಕೊಪ್ಪ ಪದವಿ ಕಾಲೇಜುಗಳ ಸಹಯೋಗದಲ್ಲಿ ಭಾನುವಾರ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆ ಚೇರ್ಮನ್ ವಿ.ಬಿ. ಸಾಣಿಕೊಪ್ಪ ಮಾತನಾಡಿ, ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ಪ್ರಜೆಗಳು ನಡೆದುಕೊಂಡು ದೇಶದ ಅಭಿವದ್ಧಿಗೆ ಶ್ರಮಿಸಬೇಕು ಎಂದು ವಿದ್ಯಾಥಿಗಳಿಗೆ ಕರೆ ನೀಡಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳಿಂದ ರೂಪಕಗಳು, ಬ್ಯಾಂಡ್ ಹಾಗೂ ಲೇಜೀಂ, ದೇಶಭಕ್ತಿ ಗೀತೆಗಳ ಪಥಸಂಚಲನ ಜರುಗಿತು. ಸಂಸ್ಥೆಯ ಕಾರ್ಯದರ್ಶಿ ಶ್ರೀಶೆಲ ತುರಮರಿ, ಕೋಶಾಧಿಕಾರಿ ಮಹಾಂತೇಶ ಸಾಣಿಕೊಪ್ಪ , ನಿರ್ದೇಶಕರಾದ ಎಸ್.ಪಿ. ಸಾಣಿಕೊಪ್ಪ, ಎಂ.ವಿ. ತುರಮರಿ, ಎಸ್.ವಿ. ಗಣಾಚಾರಿ, ಎಸ್.ಕೆ. ಕುರಗುಂದ, ಪ್ರಾಚಾರ್ಯರಾದ ಎಸ್.ಎಸ್.ಶಾಸ್ತ್ರಿ, ಆರ್.ಬಿ.ಹುಣಶೀಕಟ್ಟಿ, ಮುಖ್ಯಶಿಕ್ಷಕ ಎಂ.ಬಿ. ಕಾಮಗೌಡ, ಹಾಗೂ ಸಿಬ್ಬಂದಿ ಇದ್ದರು. ದೆಹಿಕ ಶಿಕ ಎ.ಆರ್.ಪಾಟೀಲ ನಿರೂಪಿಸಿದರು.