ಉತ್ತಮ ಸಮಾಜಕ್ಕಾಗಿ ಶ್ರಮಿಸೋಣ

web4
ಮುರಗೋಡದಲ್ಲಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆ, ಆಮಂತ್ರಣ ಪತ್ರಿಕೆಯ ಸಂಕೀರ್ತನಾ ಯಾತ್ರೆ ಜರುಗಿತು. ಗುರುಮಹಾಂತೇಶ ಹಿರೇಮಠ, ಚಿದಂಬರ ಮೇಟಿ, ಪ್ರದೀಪ ಪಟ್ಟಣಶೆಟ್ಟಿ ಇತರರಿದ್ದರು.
Published on

ಮುರಗೋಡ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಅಂಗವಾಗಿ ಮುರಗೋಡಕ್ಕೆ ಆಗಮಿಸಿದ ಮಂತ್ರಾಕ್ಷತೆ,ಆಮಂತ್ರಣ ಪತ್ರಿಕೆ ಸ್ವಾಗತ ನಿಮಿತ್ತ ಸೋಮವಾರ ಸಂಕೀರ್ತನಾ ಯಾತ್ರೆ ಜರುಗಿತು.

ಸ್ಥಳೀಯ ಹನುಮಂತ ದೇವಸ್ಥಾನದ ಸಭಾಭವನದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಗುರುಮಹಾಂತೇಶ ಹಿರೇಮಠ ಮಾತನಾಡಿ, ಆರ್‌ಎಸ್‌ಎಸ್, ಬಜರಂಗದಳ, ವಿಶ್ವ ಹಿಂದು ಪರಿಷತ್ ಸೇರಿ ಅನೇಕ ಸಂಘಟನೆಗಳು ಧರ್ಮದ ಜತೆ ದೇಶದ ಭದ್ರತೆಗಾಗಿ ಶ್ರಮಿಸಿದ್ದು, ಒಳ್ಳೆಯ ಸಂಸ್ಕಾರದಿಂದ ಉತ್ತಮ ಸಮಾಜ ನಿರ್ಮಿಸೋಣ ಎಂದರು. ಆರ್‌ಎಸ್‌ಎಸ್ ಸಂಚಾಲಕರಾದ ಚಿದಂಬರ ಮೇಟಿ, ಪ್ರದೀಪ ಪಟ್ಟಣಶೆಟ್ಟಿ, ಬಸವರಾಜ ನಾಗನೂರ ಮಾತನಾಡಿ, ಮುರಗೋಡ ಗ್ರಾಮದಿಂದ 15ಕ್ಕೂ ಹೆಚ್ಚು ಕರಸೇವಕರು ಸೇವೆ ಸಲ್ಲಿದ್ದು ಹೆಮ್ಮೆ ಎಂದರು.

ಲಕ್ಕಪ್ಪ ಕಾರಗಿ, ಶೇಖಣ್ಣ ಪಾಟೀಲ, ಲವ ಮಡಿವಾಳರ, ರವಿ ಹಂಪಿಹೊಳಿ, ಮುರಳೀಧರ ಹೂಲ್ಲೂರ, ಸುಧೀಂದ್ರ ಹಂಪಿಹೊಳಿ, ದೀಪಕ ಗುಡಸೆ, ಈರಪ್ಪ ಸಂಗೊಳ್ಳಿ, ಸುರೇಶ ಮ್ಯಾಕಲ, ಮಹಾಂತೇಶ ಮರಳಿ, ಮಹಾಂತೇಶ ಬಾಳಿಕಾಯಿ, ರಂಗಪ್ಪ ಕೋಲಕಾರ, ಮಹಾಂತೇಶ ಬಡಿಗೇರ ಇದ್ದರು. ಮಂತ್ರಾಕ್ಷತೆ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಮಹಿಳೆಯರು ಆರತಿ ಹಿಡಿದು, ರಂಗೋಲಿ ಬಿಡಿಸಿ ಸ್ವಾಗತಿಸಿದರು. 15 ಕರಸೇವಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net