ಭೂಸ್ವಾಧಿನ ಕೈ ಬಿಡಲಿ, ಹೋರಾಟಕ್ಕೆ ನ್ಯಾಯ ನೀಡಲಿ

22 06 2025_BNG_RURAL_PAGE_2
ಹೊಸಕೋಟೆಯಲ್ಲಿ ವಿವಿಧ ಸಂಟನೆಗಳ ಮುಖಂಡರು ಸುದ್ದಿಗೋಷ್ಠಿ ನಡೆಸಿ, ದೇವನಹಳ್ಳಿ ಚಲೋ ಕರಪತ್ರ ಬಿಡುಗಡೆ ಮಾಡಿದರು, ದಲಿತ ಸಂರ್ಷ ಸಮಿತಿಯ ತಾಲೂಕು ಸಂಚಾಲಕ ಚಿನ್ನಸ್ವಾಮಿ, ಕರ್ನಾಟಕ ರೈತ ಸಂದ ಸಂಟನಾ ಕಾರ್ಯದರ್ಶಿ ಹೈದರ್​ ಬೇಗ್​,ಸಿಪಿಐಎಂ ಸಂಟನಾ ಕಾರ್ಯದರ್ಶಿ ವೆಂಕಟರಾಜು, ಮುತ್ಕೂರು ಮುನಿರಾಜ್​ ಇದ್ದರು.
Published on

ಹೊಸಕೋಟೆ : ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಭಾಗದ ರೈತರ ಭೂಮಿಯನ್ನು ಸರ್ಕಾರ ಸ್ವಾಧಿನ ಮಾಡಿಕೊಳ್ಳಲು ಮುಂದಾಗಿರುವುದು ಕಂಡನೀಯ. ಕೂಡಲೇ ನಿರ್ಧಾರ ಕೈಬಿಡುವುದರ ಮೂಲಕ 1180 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟಕ್ಕೆ ನ್ಯಾಯ ಒದಗಿಸಬೇಕು ಎಂದು ದಲಿತ ಸಂರ್ಷ ಸಮಿತಿಯ ತಾಲೂಕು ಸಂಚಾಲಕ ಚಿನ್ನಸ್ವಾಮಿ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರ್ಬಕಾತ್​ ಭೂಮಿ ದಲಿತರಿಗೆ ನೀಡಿ ರೈತರ ಜೀವನ ಹಸನಾಗಿಸಿದ ಸರ್ಕಾರ ಇದೀಗ ಅದೇ ಭೂಮಿಯನ್ನು ಕಾಪೋರ್ರೇಟ್​ ಸಂಸ್ಥೆಗಳಿಗೆ ನೀಡಿ ರೈತರನ್ನು ಅದೇ ಕಾಪೋರ್ರೇಟ್​ ಸಂಸ್ಥೆಗಳ ಮುಂದೆ ಸ್ಯಕ್ಯುರಿಟಿ ಗಾರ್ಡ್​ಗಳಾಗಿ ಮಾಡುವ ಹುನ್ನಾರ ಮಾಡುತ್ತಿದೆ. ಕೂಡಲೇ ಚನ್ನರಾಯಪಟ್ಟಣ ಹಾಗೂ ಹೊಸಕೋಟೆ ತಾಲೂಕಿನ ನಂದಗುಡಿ ಭಾಗದ ಭೂಸ್ವಾದಿನವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿ ಅಧ್ಯಕ್ಷ ವರದಾಪುರ ನಾಗರಾಜ್​ ಮಾತನಾಡಿ, ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಜೂ.25ರ ದೇವನಹಳ್ಳಿ ಚಲೋಗೆ ಹಲವು ಸಂಟನೆಯ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕು ಎಂದರು. ಸಿಐಟಿಯು ಕಾರ್ಯದರ್ಶಿ ಮೋಹನ್​ ಬಾಬು, ಕರ್ನಾಟಕ ರೈತ ಸಂದ ಸಂಟನಾ ಕಾರ್ಯದರ್ಶಿ ಹೈದರ್​ ಬೇಗ್​ ಹಾಗೂ ಹಲವು ಇದ್ದರು.

ಭೂಸ್ವಾದಿನ ಕೈ ಬಿಡುವವರೆಗೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವ ರೈತರಿಗೆ ಬೆಂಬಲವಾಗಿರುತ್ತೇವೆ. ದೇವನಹಳ್ಳಿ ಚಲೋಗೆ ರೈತರು ಭಾಗಿಯಾಗಲಿದ್ದು, ಅದಕ್ಕೆ ಸರ್ಕಾರ ವಿರೋಧ ವ್ಯಕ್ತಪಡಿಸಿ ಜೈಲಿಗೆ ಹಾಕಿದರೂ ನಾವು ಜೈಲ್​ ಬರೋ ಕಾರ್ಯಕ್ರಮಕ್ಕೂ ಸೈ. | ಹೈದರ್​ ಬೇಗ್​ ಕರ್ನಾಟಕ ರೈತ ಸಂದ ಸಂಟನಾ ಕಾರ್ಯದರ್ಶಿ ಕಾಪೋರ್ರೇಟ್​ ಸಂಸ್ಥೆಗಳಿಗೆ ಫಲವತ್ತಾದ ಭೂಮಿ ನೀಡುವ ಸರ್ಕಾರದ ನಿಲುವು ಖಂಡನೀಯ. ದೇವನಹಳ್ಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಹಳಷ್ಟು ಗುಡ್ಡಗಾಡು ಪ್ರದೇಶವಿದ್ದು, ಕೃಷಿಗೆ ಯೋಗ್ಯವಲ್ಲದ ಜಮೀನು ಬೇಕಾದಷ್ಟಿದೆ. ಆ ಜಾಗದಲ್ಲಿ ಕಾರ್ಪೊರೇಟ್​ ಸಂಸ್ಥೆಗಳಿಗೆ ಸರ್ಕಾರ ಜಾಗ ನೀಡಲಿ. | ಮೋಹನ್​ ಬಾಬು ಕಾರ್ಯದರ್ಶಿ ಸಿಐಟಿಯು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net