ಗಾಂಧೀಜಿ ತತ್ವ ಸಿದ್ಧಾಂತಗಳಿಗೆ ಬದ್ದರಾಗೋಣ; ಡಾ. ಆನಂದ ಕುಲಕರ್ಣಿ

KASAPA GANDHI JAYANTI
ವಿಜಯಪುರದ ಕಸಾಪ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಜಯಂತಿ ಆಚರಣೆಯಲ್ಲಿ ಡಾ.ಅನಂದ ಕುಲಕರ್ಣಿ ಮಾತನಾಡಿದರು. ಸಿದ್ರಾಮಯ್ಯ ಲಕ್ಕುಂಡಿಮಠ, ಹಾಸಿಂಪೀರ ವಾಲಿಕಾರ, ಡಾ.ಮಾಧವ ಗುಡಿ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ತತ್ವ ಸಿದ್ಧಾಂತಗಳಿಗೆ ಬದ್ದರಾಗಿ ಬದುಕೋಣ. ಅವರ ಸತ್ಯ, ಅಹಿಂಸೆ, ಸಮಾನತೆ, ಸಾಮರಸ್ಯ, ಸ್ವಾವಲಂಬನೆ ಹಾಗೂ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸರ್ವಕಾಲಿಕ ಎಂದು ತಾಲೂಕು ಕಸಾಪ ಅಧ್ಯಕ್ಷ ಡಾ.ಅನಂದ ಕುಲಕರ್ಣಿ ಹೇಳಿದರು.

ನಗರದ ಕಸಾಪ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಜಯಂತಿ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರು ಗಾಂಧಿ. ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯವನ್ನು ದೊರಕಿಸಿರುವ ಕೀರ್ತಿ ಗಾಂಧಿಯವರಿಗೆ ಸಲ್ಲುತ್ತದೆ ಎಂದರು.

ತಿಕೋಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿ, ಉದ್ಯೋಗಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿದವರು ಮಹಾತ್ಮ ಗಾಂಧಿ. ಸ್ವಾವಲಂಬಿ ಶಿಕ್ಷಣದ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಕರೆ ನೀಡಿದರು. ಖಾದಿ ನೂಲುವ ಮೂಲಕ ಸ್ವದೇಶಿ ಚಳುವಳಿಯನ್ನು ಜನಪ್ರಿಯಗೊಳಿಸಿದರು ಎಂದರು.

ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಅಹಿಂಸೆಯ ಅಸ್ತ್ರ ಹಿಡಿದು ಇಡೀ ರಾಷ್ಟ್ರವನ್ನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿದವರು ಗಾಂಧೀಜಿ ಎಂದರು.

ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಸುರೇಶ ಜತ್ತಿ, ಸಾಹಿತಿ ರಮೇಶ ಬಸರಗಿ, ಬಂದೇನವಾಜ ದೋಲಚಿ, ನಾಗರಾಜ ಪಾಟೀಲ, ರಮೇಶ ಯಾಳವಾರ, ಎಸ್.ಎಂ. ಜಾಲವಾದಿ, ಅರ್ಜುನ ಶಿರೂರ, ಆಶಾ ಬಿರಾದಾರ, ಬಸವರಾಜ ಬಿರಾದಾರ, ರಾಹುಲ ಚವಾಣ್, ಶ್ರೀಕಾಂತ ನಾಡಗೌಡ, ಹಣಮಂತ ಹಣಮಾಣಿ, ಕಮಲಾ ಮುರಾಳ, ವಿಜಯಲಕ್ಷ್ಮಿ ಹಳಕಟ್ಟಿ, ಚೈತನ್ಯ ಮುದ್ದೇಬಿಹಾಳ, ಸರ್ವಾನಂದ ಕೂಬರಡ್ಡಿ, ಜಿ.ಎಸ್. ಬಳ್ಳೂರ, ಬಿ.ಎಂ. ಅಜೂರ, ಶಾಂತಾ ವಿಭೂತಿ, ಟಿ.ಆರ್. ಹಾವಿನಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net