ದರ ಘೋಷಿಸಿಯೇ ಹಂಗಾಮು ಆರಂಭಿಸಲಿ

MANJU1
Published on

ಬೆಳಗಾವಿ: ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ಮಾಡುತ್ತಿರುವ ಮೋಸ ತಡೆಗಟ್ಟಲು ಎಪಿಎಂಸಿಗಳಲ್ಲೇ ತೂಕದ ಯಂತ್ರಗಳನ್ನು ಅಳವಡಿಸಬೇಕು. ಅಲ್ಲಿ ತೂಕ ಮಾಡಿಕೊಂಡು ಸಕ್ಕರೆ ಕಾರ್ಖಾನೆಗೆ ಹೋಗುವ ವಾಹನಗಳಿಗೆ ರಕ್ಷಣೆ ನೀಡಬೇಕು. ಕಬ್ಬಿನ ದರ ೂಷಿಸಿದ ನಂತರ ಹಂಗಾಮು ಆರಂಭಿಸಲು ಕಾರ್ಖಾನೆಗಳಿಗೆ ಅನುಮತಿ ನೀಡಬೇಕು.

ಇದು ನಗರದ ಎಸ್​.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಸಕ್ಕರೆ ಕಾರ್ಖಾನೆಗಳ ಮಾಲೀಕರು, ಕಬ್ಬು ಬೆಳೆಗಾರರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ರೈತರು ಒತ್ತಾಯಿಸಿದರು. ಕಾರ್ಮಿಕರ ಕೂಲಿ, ಕೃಷಿ ಸಲಕರಣೆಗಳ ಬಾಡಿಗೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಅತಿವೃಷ್ಟಿ, ಅನಾವೃಷ್ಟಿಯಿಂದ ಕಬ್ಬು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳು ಟನ್​ ಕಬ್ಬಿನ ದರ 3,500ರಿಂದ 4,500 ರೂ. ವರೆಗೆ ೂಷಣೆ ಮಾಡಬೇಕು. ಕಬ್ಬು ಕಟಾವು, ಸಾಗಣೆ ದರ ನಿಗದಿಪಡಿಸಬೇಕು. ಕಳೆದ ಸಾಲಿನಲ್ಲಿ ಬಹುತೇಕ ಕಾರ್ಖಾನೆಗಳ ಮಾಲೀಕರು ಟನ್​ ಕಬ್ಬಿಗೆ 2,900ರಿಂದ 3,000 ರೂ. ಮಾತ್ರ ನೀಡಿವೆ. ಎರಡನೇ ಕಂತಿನಲ್ಲಿ ನೀಡಬೇಕಾಗಿದ್ದ ಕಬ್ಬಿನ ಬಿಲ್​ ಬಾಕಿ ಇಲ್ಲಿಯವರೆಗೆ ನೀಡಿಲ್ಲ. ಮೊದಲೇ ಕಂತಿನಲ್ಲಿಯೇ ಎಲ್ಲ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.

ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಆರಂಭಿಸಲು ಸಜ್ಜಾಗಿವೆ. ಕಬ್ಬು ಕಟಾವು ಮತ್ತು ಸಾಗಣೆ (ಎಚ್​ಆ್ಯಂಡ್​ಟಿ) ಹಾಗೂ ನ್ಯಾಯಸಮ್ಮತ ಮತ್ತು ಮೌಲ್ಯಾಧಾರಿತ (ಎಫ್​ಆರ್​ಪಿ) ದರ ೂಷಿಸಿಲ್ಲ. ದರ ೂಷಿಸದ ಕಾರ್ಖಾನೆ ಆರಂಭಿಸಲು ಪರವಾನಗಿ ನೀಡಿದರೆ ಅಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಕ್ಸ್​ಪೀಲ್ಡ್​ ಮತ್ತು ಎಕ್ಸ್​ಗೇಟ್​ನ ಲಾಭ&ಹಾನಿ, ಎಕ್ಸ್​ಫೀಲ್ಡ್​ ದರ ಅಂತಿಮವಾಗುತ್ತಿಲ್ಲ. ಎಕ್ಸ್​ಫೀಲ್ಡ್​ನಲ್ಲಿ ಕಾರ್ಖಾನಗಳೇ ರೈತರ ಜಮೀನುಗಳಿಗೆ ತೆರಳಿ ಕಬ್ಬು ಕಟಾವು ಮಾಡಿಕೊಂಡು ಬರಬೇಕು. ಎಕ್ಸ್​ಗೇಟ್​ನಲ್ಲಿ ರೈತರೇ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಿಸಬೇಕು. ಸಕ್ಕರೆ ಕಾರ್ಖಾನೆಗಳು ಎಚ್​ಆ್ಯಂಡ್​ಟಿ ಹೆಸರಿನಲ್ಲಿ ಪ್ರತಿ ಟನ್​ಗೆ 600 ರಿಂದ 950ರೂ. ವರೆಗೆ ಕಡಿತಗೊಳಿಸುತ್ತಿವೆ. 8ರಿಂದ 100 ಕಿಮೀ ದೂರದಿಂದ ಕಬ್ಬು ತರುವವರಿಗೆ ಸಾಗಣೆ ವೆಚ್ಚ ದರ ಒಂದೇ ಆಗಿದೆ. ಹೀಗಾಗಿ ಟನ್​ ಕಬ್ಬಿಗೆ ರೈತರಿಗೆ 400ರಿಂದ 500 ರೂ.ವರೆಗೆ ನಷ್ಟವಾಗುತ್ತಿದೆ. ಈ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​, ಎಫ್​ಆರ್​ಪಿ ದರ ೂಷಿಸಿಯೇ ಹಂಗಾಮು ಆರಂಭಿಸಬೇಕು. ಕಬ್ಬಿನ ದರ ನಾಮಫಲಕ, ಡಿಜಿಟಲ್​ ತೂಕ ಯಂತ್ರಗಳನ್ನು ಅಳವಡಿಸಬೇಕು. ತೂಕದಲ್ಲಿ ವ್ಯತ್ಯಾಸ ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಎಕ್ಸ್​ಪೀಲ್ಡ್​ ಮತ್ತು ಎಕ್ಸ್​ಗೇಟ್​ನ ರೈತರಿಗೆ ನಷ್ಟ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಾರ್ಖಾನೆಗಳಿಗೆ ಸೂಚಿಸಿದರು. ಚೂನಪ್ಪ ಪೂಜೇರಿ, ರವಿ ಸಿದ್ದಮ್ಮನವರ, ಶಶಿಕಾಂತ ಪಡಸಲಗಿ, ಮಲ್ಲಿಕಾರ್ಜುನ ರಾಮದುರ್ಗ, ಈರಣ್ಣ ವಕ್ಕುಂದ, ಮಹಾಂತೇಶ ಕಮತ, ಪ್ರಕಾಶ ನಾಯಕ, ಸುಭಾಷ ಶಿರೂಬೂರ, ಶಿವಾನಂದ ಮುಗಳಿಹಾಳ ಇತರರಿದ್ದರು.

ಎಪಿಎಂಸಿಯಲ್ಲಿ ತೂಕ ಮಾಡಿಕೊಂಡು ಸಕ್ಕರೆ ಕಾರ್ಖಾನೆಗೆ ಹೋಗುವ ವಾಹನಗಳಿಗೆ ಸೂಕ್ತ ರಕ್ಷಣೆ ನೀಡಲಾಗುವುದು. ಯಾರಾದರೂ ಅಡ್ಡಿಪಡಿಸಿದರೆ 112 ನಂಬರಿಗೆ ಕರೆ ಮಾಡಿ. ಕಾರ್ಖಾನೆ ಸಿಬ್ಬಂದಿ ಕಿರುಕುಳ ನೀಡುತ್ತಿರುವ ಕುರಿತು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. > ಡಾ.ಭೀಮಾಶಂಕರ ಗುಳೇದ, ಎಸ್​ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net