ನಾಗರೀಕ ಯೋಗಕ್ಷೇಮ ಕೇಂದ್ರ ಪ್ರಾರಂಭ ಮಾಡಲಿ

raichur
raichur
Published on

 ರಾಯಚೂರು ಹಿರಿಯ ನಾಗರೀಕ ಯೋಗಕ್ಷೇಮ ಕೇಂದ್ರ ಏಕಾಎಕಿ ಸ್ಥಗಿತಗೊಳಿಸಿದ್ದು ಹಿರಿಯ ನಾಗರೀಕರು ಸೌಲಭ್ಯದಿಂದ ವಂಚಿತಗೊಳ್ಳುವಂತಾಗಿದೆ. ಕೂಡಲೇ ಪರ್ಯಾಯ ಸಂಸ್ಥೆಯಿಂದ ಯೋಗ ಕ್ಷೇಮ ಕೇಂದ್ರ ಪ್ರಾರಂಭಿಸಬೇಕೆಂದು ಹಿರಿಯ ನಾಗರೀಕರ ಸಂಘದ ಸಂಚಾಲಕ ಸುಧಾಕರ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.31 ರಿಂದ ನಗರದ ಐಡಿಎಸ್‌ಎಂಟಿ ಲೇಔಟ್‌ನಲ್ಲಿ ನಿರ್ವಹಿಸಲಾಗುತ್ತಿದ್ದ ಹಿರಿಯ ನಾಗರೀಕರ ಯೋಗ ಕ್ಷೇಮ ಕೇಂದ್ರ ಮುಚ್ಚಲಾಗಿದೆ. ಆದರೆ ಪರ್ಯಾಯ ವ್ಯವಸ್ಥೆ ಮಾಡಲು ಹಿರಿಯ ನಾಗರೀಕ ಇಲಾಖೆಯೂ ಮುಂದಾಗಿಲ್ಲ. ಪವನ ಪಾಟಿಲ್ ಎಂಬುವವರಿಗೆ ಐದು ಕೇಂದ್ರಗಳ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಹಿರಿಯ ನಾಗರೀಕ ಯೋಗ ಕ್ಷೇಮ ಕೇಂದ್ರ, ಕಾರ್ಮಿಕರ ಹಿರಿಯ ನಾಗರೀಕರ ಡೇ ಕೇರ್ ಕೇಂದ್ರ, ಹಮಾಲಿ ಹಿರಿಯ ನಾಗರೀಕರ ಡೇ ಕೇರ್ ಕೇಂದ್ರ, ಹಿರಿಯರ ವೃದ್ದಾಶ್ರಮ ಕೇಂದ್ರ ಮತ್ತು ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರ ನೀಡಲಾಗಿದೆ.

ಪ್ರತಿ ಕೇಂದ್ರಕ್ಕೂ 8.40 ಲಕ್ಷ ರೂ. ಸಾವಿರ ರುಗಳಂತೆ ಹಣ ಇಲಾಖೆ ಬಿಡುಗಡೆ ಮಾಡುತ್ತಿದೆ. ಕೇಂದ್ರಗಳಲ್ಲಿ ಇಲಾಖೆ ನಿಯಮಾವಳಿ ಪ್ರಕಾರ ಸೌಲಭ್ಯ, ಸೌಕರ್ಯ ಒದಗಿಸುತ್ತಿಲ್ಲ. ಇಲಾಖೆ ಕೇಂದ್ರಗಳನ್ನು ನಿರ್ವಹಿಸಲಿ ಇಲ್ಲ ಆದರಿಂದ ಜೂ.23 ರಂದು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ನೌಕರರ ತಿಮ್ಮಾರೆಡ್ಡಿ,ಈಶ್ವರಪ್ಪ, ಗಂಗಪ್ಪ, ಸಂಪತ್‌ಕುಮಾರ, ರುದ್ರಯ್ಯ ಗುಣಾರಿ, ಶಂಕರಪ್ಪ, ಹನುಮಂತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net