ವೈಚಾರಿಕ ಮನೋಭಾವ ಬಿತ್ತಲಿ

5Athani2
Published on

ಅಥಣಿ: ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವ ಮೂಡಿಸಿ ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಸಾಹಿತಿ ಡಾ.ಜೆ.ಪಿ.ದೊಡಮನಿ ಹೇಳಿದರು.

ಸ್ಥಳೀಯ ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಶಿವಶಂಕರ ಹಂಜಿ ಮಾತನಾಡಿ, ಸಂಸ್ಥೆ ನಡೆದು ಬಂದ ದಾರಿ ಹಾಗೂ ದೊಡಮನಿ ದಂಪತಿ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸೇವೆ ಸ್ಮರಿಸಿದರು. ಸಾಹಿತಿ ಪ್ರಭಾ ಬೋರಗಾಂವಕರ, ಸಂಸ್ಥೆ ಉಪಾಧ್ಯಕ್ಷ ಪ್ರಕಾಶ ಮಹಾಜನ ಮಾತನಾಡಿದರು.

ದೊಡಮನಿ ದಂಪತಿ ಹಾಗೂ ಸಾಧಕ ಶಿಕ್ಷಕರು, ಮಕ್ಕಳನ್ನು ಸನ್ಮಾನಿಸಲಾಯಿತು.

ಸಂಸ್ಥೆ ಕಾರ್ಯದರ್ಶಿ ಒ.ಎಸ್.ಸಾವಡಕರ, ನಿರ್ದೇಶಕರಾದ ಅಶೋಕ ಬುರ್ಲಿ, ವಿಜಯಕುಮಾರ ಬುರ್ಲಿ, ಸುನೀಲ ಶಿವಣಗಿ, ಶ್ರೀಶೈಲ ಸಂಕ, ಮುಖ್ಯ ಶಿಕ್ಷಕ ಪಿ.ಡಿ.ಚನಗೌಡರ, ಎಂ.ಎಸ್.ದೇಸಾಯಿ, ಆಡಳಿತಾಧಿಕಾರಿ ಭಾರತಿ ಪೂಜಾರಿ, ಎಂ.ಎಸ್.ಧರಿಗೌಡರ, ಶಿಕ್ಷಕಿಯರಾದ ಜ್ಯೋತಿ ವೈಚಾಳ, ಜಯಾ ಮುಳ್ಳೂರ, ಶಿವಲೀಲಾ ಮಠಪತಿ, ಸುಷ್ಮಾ ನಂದಗಾಂವ, ರೋಹಿಣಿ ಯಾದವಾಡ, ಬಿ.ಡಿ.ಕೋಳಿ, ಎಂ.ಎಸ್.ಧರಿಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net