

ಇಟಗಿ: ಸಿಕ್ಕ ಅವಕಾಶ ಬಳಸಿಕೊಂಡು ಉನ್ನತ ಗುರಿ ಸಾಧಿಸಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಿರಿಯ ಉಪನ್ಯಾಸಕ ಶರೀಸಾಹೇಬ್ ನದ್ಾ ಹೇಳಿದರು. ಇಲ್ಲಿನ ಜನತಾ ಶಿಕ್ಷಣ ಪ್ರಸಾರ ಸಮಿತಿಯ ಚನ್ನಮ್ಮರಾಣಿ ಸ್ಮಾರಕ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ತಂದೆ- ತಾಯಿಗಳ ಋಣ ತೀರಿಸಲು ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ಬದುಕಿ ಎಂದರು. ಬೋಗುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ರುದ್ರಗೌಡ ನಂದಿಹಳ್ಳಿ, ದೇವರಶೀಗಿಹಳ್ಳಿ ವಿಶ್ವಭಾರತಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಹುಲ್ಲೂರ ಮಾತನಾಡಿದರು. ಸಂಸ್ಥೆಯ ವೈಸ್ ಚೇರ್ಮನ್ ಬಿ.ವಿ.ಬೆಣಚಮರ್ಡಿ ಅಧ್ಯಕ್ಷತೆ ವಹಿಸಿದ್ದರು.
ವಿ.ವಿ.ಸಾಣಿಕೊಪ್ಪ, ಎಸ್.ಬಿ.ತುರಮರಿ, ಎಂ.ಎಸ್.ಸಾಣಿಕೊಪ್ಪ, ಎಸ್.ವಿ.ಗಣಾಚಾರಿ, ಮುಖ್ಯಾಧ್ಯಾಪಕ ಎಂ.ಬಿ.ಕಾಮಗೌಡ, ಪ್ರಾಚಾರ್ಯರಾದ ಆರ್.ಬಿ.ಹುಣಶೀಕಟ್ಟಿ, ನಿವತ್ತ ಪ್ರಾಚಾರ್ಯ ವಿ.ವಿ.ಬಡಿಗೇರ ಇತರರು ಇದ್ದರು. ಕೆ.ಟಿ.ತಳವಾರ ಸ್ವಾಗತಿಸಿದರು. ಬಿ.ಕೆ.ನಾವಲಗಟ್ಟಿ ನಿರೂಪಿಸಿದರು. ಎಂ.ಎಸ್.ಪಾಟೀಲ ವಂದಿಸಿದರು.