ಆಸ್ತಿಕರ ಹೆಚ್ಚಳ ಮರು ಪರಿಶೀಲಿಸಲಿ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಆಸ್ತಿ ಕರ ಮತ್ತು ಸೆಸ್​, ಫೀ ಸೇರಿ ಒಟ್ಟು ಕರದಲ್ಲಿ ಭಾರೀ ಹೆಚ್ಚಳವಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಹಾಗೂ ಹು-ಧಾ ಮಹಾನಗರ ಪಾಲಿಕೆ ಎಷ್ಟರ ಮಟ್ಟಿಗೆ ಕಾರಣ ಎಂಬುದನ್ನು ಜನತೆ ವಿಚಾರ ಮಾಡಬೇಕಿದೆ. ಇದಲ್ಲದೆ ಸರ್ಕಾರ ಹಾಗೂ ಪಾಲಿಕೆಗಳು ಸಹ ಈ ಹೆಚ್ಚಳ ಮರು ಸ್ಥಳಿಯರಾದ ರವೀಂದ್ರ ಆಕಳವಾಡಿ, ಉದಯ ಯಂಡಿಗೇರಿ, ಶರತ್​ ಟಿಕಾರೆ, ರಾಜು ಕುಲಕಣಿರ್, ಈರಣ್ಣ ಆಕಳವಾಡಿ ಆಗ್ರಹಿಸಿದ್ದಾರೆ.

ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಗೆ ಬಂದ ಬಳಿಕ ಘನ ತ್ಯಾಜ್ಯ ವಿಲೇವಾರಿ ಮತ್ತು ಅರ್ಬನ್​ ಟ್ರಾನ್ಸ್​ಪೋರ್ಟ್​ ಸೆಸ್​, ವಾಹನ ಸೆಸ್​ಗಳನ್ನು ವಿಧಿಸಲಾಯಿತು. ಈಗ ಘನ ತ್ಯಾಜ್ಯ ಸರ್ವಿಸ್ ಚಾರ್ಜ್​ ಮತ್ತು ಯುಜಿಡಿ ಬಳಕೆದಾರರ ಶುಲ್ಕ ವಿಧಿಸಲಾಗಿದೆ.

ಆಸ್ತಿ ಕರ ಕುರಿತು ಪಾಲಿಕೆ ಠರಾವು ಮಾಡಿ ಸ್ಥಳಿಯ ಪತ್ರಿಕೆಗಳಲ್ಲಿ ಜಾಹೀರಾತು ನೀಡುವಂತೆ ಕಲಂ 106 ಹೇಳುತ್ತದೆ. ಸ್ವಯಂ ನಿರ್ಧರಣಾ ಆಸ್ತಿ ತೆರಿಗೆ ವಿವರ ಪಟ್ಟಿಯನ್ನು ಕರದಾತ ತುಂಬಿ ಕೊಡುವಂತೆ ಕಲಂ 112ಅ ಹೇಳುತ್ತದೆ. 2 ವರ್ಷಗಳಿಂದ ಈ ಕಲಮಿಗೆ ವಿರುದ್ಧವಾಗಿ ಕಂಪ್ಯೂಟರ್​ನಿಂದ ತಯಾರಾದ ತೆರಿಗೆ ಪಟ್ಟಿ ಪ್ರಕಾರ (ಅದು ತಪ್ಪಿದ್ದರೂ) ತುಂಬುವ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ಕರ ನಿರ್ಧರಣೆ ಆದೇಶ ಮಾಡಬೇಕೆಂದಿದ್ದರೂ ಬಹುತೇಕ ಆಸ್ತಿಯ ಕರ ನಿರ್ಧರಿಸಿಲ್ಲ.

ಸ್ಟಾಂಪ ಆ್ಯಕ್ಟ ಅಡಿ ಆಸ್ತಿಗಳ ಮೌಲ್ಯ ನಿರ್ಧಾರವಾಗದ ವರ್ಷಗಳಲ್ಲಿ ಹಿಂದಿನ ವರ್ಷಕ್ಕಿಂತ ಶೇ. 3ರಷ್ಟು ಆಸ್ತಿ ಕರ ಹೆಚ್ಚಾಗಬೇಕು. ಆದರೆ ಈ ವರ್ಷ ಎಷ್ಟು ಹೆಚ್ಚಾಗಿದೆ? ಎಂದು ತಿಳಿಯುತ್ತಿಲ್ಲ. ಯುಜಿಡಿ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ದರ ನಿಗದಿ ಪಡಿಸುವಾಗ ಸಮೀಕ್ಷೆ ಮಾಡಿಲ್ಲ. ಹೀಗಾಗಿ ಇವುಗಳ ಕುರಿತು ಪುನರ್​ ಪರಿಶೀಲನೆ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net