ಏಳಿಗೆಗೆ ಶ್ರಮಿಸುವವರನ್ನು ಗೌರವಿಸೋಣ: ಡಾ. ರಾಜನಂದಿನಿ ಕಾಗೋಡು

7sgr3
ಸಾಗರದಲ್ಲಿ ರೋಟರಿ ಕ್ಲಬ್ ಏರ್ಪಡಿಸಿದ್ದ ಕಾರ್ಯಕ್ರಮದÀಲ್ಲಿ ಡಾ. ಪುಟ್ಟಪ್ಪ ಬೇತೂರು, ಡಾ.ಎಚ್.ಎಂ.ಶಿವಕುಮಾರ್, ಪಿ.ಎಸ್.ಪ್ರಭು, ಕೆ.ಜಿ.ರಾಜಗೋಪಾಲ್, ಟಿ.ಪಿ.ಭಾಸ್ಕರ, ಕೆ.ಟಿ.ಸತ್ಯವತಿ, ಎ.ವಿ. ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ರಾಜನಂದಿನಿ, ಉಷಾ ರಮಣ, ಮಹೇಶ್ ಅಂಕದ್, ಕೆ.ಎನ್,ಶ್ರೀಧರ್, ಶಾಂತಕುಮಾರ್, ರಾಜೀವ್ ಇತರರಿದ್ದರು.
Published on

ಸಾಗರ: ಸೈನಿಕರು, ವೈದ್ಯರು, ಶಿಕ್ಷಕರು ಮತ್ತು ಲೆಕ್ಕ ಪರಿಶೋಧಕರು ನಾಡಿಗೆ ನೀಡಿರುವ ಕೊಡುಗೆಯನ್ನು ಗುರುತಿಸಿ ಗೌರವಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ರೋಟರಿ ಕ್ಲಬ್ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಹೇಳಿದರು.

ರೋಟರಿ ಭವನದಲ್ಲಿ ಬುಧವಾರ ರೋಟರಿ ಕ್ಲಬ್, ರೋಟರಿ ಇನ್ನರ್‌ವ್ಹೀಲ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ವಿಜಯೋತ್ಸವ, ವೈದ್ಯರು, ಲೆಕ್ಕಪರಿಶೋಧಕರು ಮತ್ತು ಶಿಕ್ಷಕರ ದಿನಾಚರಣೆಯಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ. ಕಾರ್ಗಿಲ್ ವಿಜಯೋತ್ಸವ ದೇಶದ ಹೆಮ್ಮೆಯ ಸಂಕೇತ. ವೈದ್ಯರು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದರೇ, ಲೆಕ್ಕ ಪರಿಶೋಧಕರು ದೇಶದ ಆರ್ಥಿಕ ವ್ಯವಸ್ಥೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಶಿಕ್ಷಕರು ಅಕ್ಷರಸ್ಥರ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದರು.
ಡಾ. ಪುಟ್ಟಪ್ಪ ಬೇತೂರು, ಡಾ.ಎಚ್.ಎಂ.ಶಿವಕುಮಾರ್, ಪಿ.ಎಸ್.ಪ್ರಭು, ಕೆ.ಜಿ.ರಾಜಗೋಪಾಲ್, ಟಿ.ಪಿ.ಭಾಸ್ಕರ, ಕೆ.ಟಿ.ಸತ್ಯವತಿ, ಎ.ವಿ. ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಷಾ ರಮಣ, ಮಹೇಶ್ ಅಂಕದ್, ಕೆ.ಎನ್.ಶ್ರೀಧರ್, ಶಾಂತಕುಮಾರ್, ಬಿ.ಎನ್.ರಾಜೀವ್, ರಾಜೇಶ್ವರಿ ಅಂಕದ್, ಜಗದೀಶ್, ಗುರುಪ್ರಸಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net