

ಶ್ರೀನಿವಾಸಪುರ: ವಿಶ್ವದಲ್ಲಿಯೇ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿರುವುದು ಭಾರತ ಸಂವಿಧಾನವನ್ನು ನಾವೆಲ್ಲ ಅತ್ಯಂತ ಗೌರವದಿಂದ ಕಾಣಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಶಾಸಕರ ಅನುದಾನದಲ್ಲಿ 400 ಕೋಟಿ ರೂಪಾಯಿಯನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ. ಕ್ಷೇತ್ರವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಗೆ ಕ್ರಮವಹಿಸಲಾಗಿದ್ದು, ಇದರ ಭಾಗವಾಗಿ ಅಮಾನಿಕೆರೆ ಅಂಗಳವನ್ನು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, ಪಾರ್ಕ್ ನಿರ್ಮಿಸಲಾಗುವುದು.
ಇನ್ನು 5 ಸಾವಿರ ಎಕರೆಯಲ್ಲಿ ಕೈಗಾರಿಕಾ ವಲಯ ಸ್ಥಾಪನೆ, ತಹಸೀಲ್ದಾರ್ ಕಟ್ಟಡ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.
ತಹಸೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ಸ್ವಾತ್ರಂತ್ರ ಬಳಿಕ ದೇಶ ವಿವಿಧ ರಾಜ್ಯ, ಪ್ರಾಂತ್ಯಗಳಾಗಿ ವಿಂಗಡಣೆಯಾಗಿತ್ತು. ಈ ವೇಳೆ ರಾಷ್ಟ್ರನಾಯಕರೆಲ್ಲರೂ ಒಟ್ಟುಗೂಡಿ ವಿಂಗಡಣೆಯಾಗಿದ್ದ ರಾಜ್ಯಗಳನ್ನು ಒಂದು ರಾಷ್ಟ್ರವನ್ನಾಗಿ ಘೋಷಿಸಿದರು. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದರು. ಅದನ್ನು ಸಮರ್ಪಿಸಿಕೊಂಡ ದಿನವೇ ಗಣರಾಜ್ಯೋತ್ಸವ ಎಂದರು.
ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪೊಲೀಸ್ ಸಿಬ್ಬಂದಿ ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳ ಪಥಸಂಚಲನ ಗಮನಸೆಳೆಯಿತು.
ಬಿಆರ್ಸಿ ಕೆ.ಸಿ.ವಸಂತ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬೈರೇಗೌಡ, ಕೃಷಿ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಪಿಡಬ್ಲೂಡಿ ಎಇಇ ನಾರಾಯಣಸ್ವಾಮಿ, ಟಿಪಿಒ ವೆಂಕಟಸ್ವಾಮಿ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಎಂ.ಬಿ.ಗೊರವನಕೊಳ್ಳ, ಶಿವಕುಮಾರ್, ಸಿಡಿಪಿಒ ಜ್ಯೋತಿ ಲಕ್ಷಿ$್ಮ, ಬಿಸಿಎಂ ಅಧಿಕಾರಿ ಪ್ರಸನ್ನಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಟಿ.ಸುಲೋಚನ, ಗೌನಿಪಲ್ಲಿ ಪೊಲೀಸ್ ಠಾಣೆ ಪಿಎಸ್ಐ ರಾಮು, ಆರ್ಐಗಳಾದ ಮುನಿರೆಡ್ಡಿ, ಗುರುರಾಜರಾವ್, ಎಫ್ಡಿಎ ಎಚ್.ಎಸ್.ಅಭಿಷೇಕ್, ಪುರಸಭೆ ಕಂದಾಯ ಅಧಿಕಾರಿ ಎನ್.ಶಂಕರ್, ಆಶ್ರಯ ನೀಲ್ಬಾಗ್ ಶಾಲೆ ಮುಖ್ಯಶಿಕ್ಷಕ ಮಂಜುನಾಥ್ ಇದ್ದರು.