

ಮುದಗಲ್: ತಲೇಖಾನ್ ಗ್ರಾಪಂ ವ್ಯಾಪ್ತಿಯ ಲಿಂಬೆಪ್ಪನ ತಾಂಡಾ, ದೇಸಾಯಿ ಭೋಗಾಪೂರ, ಹಡಗಲಿ, ಯರದೊಡ್ಡಿ, ಗ್ರಾಮದಲ್ಲಿ ವಿದ್ಯುತ್ ಸರಬರಾಜು ಮಾಡುವ ಕಂಬ ಬದಲಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಕಬ್ಬು ಭಸ್ಮ
ಗ್ರಾಮದಲ್ಲಿ ವಿದ್ಯುತ್ ಸರಬರಾಜು ಮಾಡಿದಾಗಿನಿಂದ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಬದಲಿಸಿಲ್ಲ. ಕಂಬಗಳು ಶಿಥಿಲಗೊಂಡಿದ್ದು, ಬೀಳುವಹಂತಕ್ಕೆ ತಲುಪಿವೆ. ಹಡಗಲಿ ಗ್ರಾಮದಲ್ಲಿ 5-6 ವಿದ್ಯುತ್ ಕಂಬಗಳು ಬಾಗಿದ್ದು, ಲಿಂಬೇಪ್ಪನತಾಂಡಾದಲ್ಲಿ ವಿದ್ಯುತ್ ತಂತಿ ಜೋತು ಬಿದ್ದು ಮನುಷ್ಯರಿಗೆ ತಾಗುತ್ತಿವೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ವಿದ್ಯುತ್‌ನಿಂದ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ. ಜೋತುಬಿದ್ದ ವಿದ್ಯುತ್ ತಂತಿಗಳನ್ನು ಬಿಗಿಗೊಳಿಸಬೇಕು. ಶಿಥಿಲಗೊಂಡ ಕಂಬಗಳನ್ನು ಬದಲಿಸಬೇಕೆಂದು ಗ್ರಾಪಂ ಸದಸ್ಯರಾದ ದುರುಗಪ್ಪ ಕಟ್ಟಿಮನಿ, ಹನುಮಂತ ಗಂಟಿ, ಪಾಂಡುರಂಗ ನಾಯ್ಕ, ಮೌನೇಶ ಗ್ರಾಮಸ್ಥರಾದ ಗ್ಯಾನಪ್ಪ, ಹನುಮಂತಪ್ಪ ಆಗ್ರಹಿಸಿದ್ದಾರೆ.