ದಾನ ನೀಡಿದವರನ್ನು ನೆನೆಯೋಣ

DENIGE
Published on

ನವಲಗುಂದ: ಸರ್ಕಾರಿ ಶಾಲೆಗಳಿಗೆ ದಾನ ಕೊಟ್ಟ ಮಹನೀಯರನ್ನು ನೆನೆಯುವುದು ನಮ್ಮ ಕರ್ತವ್ಯವಾಗಿದೆ ಎಂದು ಮುಖ್ಯ ಶಿಕ್ಷಕ ಎಸ್.ಎಂ. ಬೆಂಚಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಮಾದರಿ ಕೇಂದ್ರ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೌಂಡ್ ಸಿಸ್ಟಮ್ ದೇಣಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಸ್​ಡಿಎಂಸಿ ಅಧ್ಯಕ್ಷ ಗಣಪತಿ ದಲಬಂಜನ್ ಮಾತನಾಡಿ, ಶಾಲೆಯ ಮಕ್ಕಳಿಗೆ ಅನುಕೂಲವಾಗಲೆಂದು ಸೌಂಡ್ ಸಿಸ್ಟಮ್ ದೇಣಿಗೆ ನೀಡಿದ್ದೇನೆ. ಮುಂದೆಯೂ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದರು.

ಡಾ. ಸಿದ್ದಲಿಂಗೇಶ ಹಂಡಿಗಿ ಅವರನ್ನು ಗಣಪತಿ ದಲಬಂಜನ್ ಅವರನ್ನು ಸನ್ಮಾನಿಸಿದರು. ಶಿಕ್ಷಕರಾದ ವೇದಾವತಿ ದಂಡಿಗೆದಾಸರ, ಶ್ರೀನಿವಾಸ ನವೀಂದ್ರಕರ, ಮಾಬುಸಾಬ್ ಯರಗುಪ್ಪಿ, ಆರ್.ಎನ್. ಹಾಲಿಗೆರಿ, ನೀಲಯ್ಯ ತಾಳಿಕೋಟಿಮಠ, ಅಡುಗೆ ಸಹಾಯಕಿಯರಾದ ಉಡಚಮ್ಮ ಭೋವಿ, ಸರೋಜಾ ಅಂಬಿಗೇರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net