ನಿತ್ಯ ಹುತಾತ್ಮರನ್ನು ಸ್ಮರಿಸೋಣ

Let's remember the martyrs everyday
Let's remember the martyrs everyday
Published on

ಹುನಗುಂದ: ಅನೇಕ ಮಹನೀಯರ ತ್ಯಾಗ, ಬಲಿದಾನ ಮತ್ತು ಹೋರಾಟದ ಲದ ಪರಿಶ್ರಮದ ಮೂಲಕ ದೇಶಕ್ಕೆ ದೊರೆತ ಸ್ವಾತಂತ್ರ್ಯವನ್ನು ನಾವೆಲ್ಲರೂ ಗೌರವಿಸಿ ಅಭಿಮಾನದಿಂದ ಒಪ್ಪಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಶಾಸಕ ವಿಜಯಾನಮದ ಕಾಶಪ್ಪನವರ ಹೇಳಿದರು.

ಪಟ್ಟಣದ ಟಿಸಿಎಚ್ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತದಿಂದ ರವಿವಾರ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜ.26 ಮತ್ತು ಆಗಸ್ಟ್ 15ರಂದು ಮಾತ್ರ ದೇಶ ಪ್ರೇಮ ವ್ಯಕ್ತಪಡಿಸಿದರೆ ಸಾಲದು. ನಿತ್ಯ ಹುತಾತ್ಮರನ್ನು ಸ್ಮರಿಸುವ ಕಾರ್ಯವಾಗಬೇಕು ಎಂದರು.

ತಹಸೀಲ್ದಾರ್ ನಿಂಗಪ್ಪ ಬಿರಾದಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿಶ್ವಕ್ಕೆ ಮಾದರಿಯಾದ ನಮ್ಮ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ದೇಶದ ಪ್ರಜೆಗಳಾಗಿದ್ದೇವೆ. ಜ.26 ದೇಶದ ಆಡಳಿತವನ್ನು ಸುಸ್ಥಿಗೆ ತಂದ ದಿನವಾಗಿದೆ ಎಂದರು.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಬಡ್ಡಿ ಕ್ರೀಡಾಪಟು ಧನ್ನೂರಿನ ಚಂದ್ರಿಕಾ ನಾಗಬೇನಾಳ, ಖೋಖೋ ರಾಜ್ಯಮಟ್ಟದಲ್ಲಿ ದ್ವಿತಿಯ ಸ್ಥಾನ ಪಡೆದ ಮಂಜುನಾಥ ಮುರಟಗಿ ಮತ್ತು ಪ್ರವೀಣ ಭೋವಿ ಅವರನ್ನು ಗೌರವಿಸಲಾಯಿತು. ಪೊಲೀಸ್ ಪಡೆ, ಎನ್‌ಸಿಸಿ ಮತ್ತು ಸ್ಕೌಟ್ ಮತ್ತು ಗೈಡ್ಸ್ ತಂಡಗಳಿಂದ ಗೌರವ ವಂದನೆ ನಡೆಯಿತು.

ಪೊಲೀಸ್ ಉಪಾಧೀಕ್ಷಕ ವಿಶ್ವನಾಥರಾವ್ ಕುಲಕರ್ಣಿ, ತಾಪಂ ಇಒ ಮುರಳೀಧರ ದೇಶಪಾಂಡೆ, ಸಿಪಿಐ ಸುನೀಲ ಸವದಿ, ಪಿಎಸ್‌ಐ ಪ್ರಕಾಶ ಡಿ., ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಉಪಾಧ್ಯಕ್ಷೆ ರಾಜಮ್ಮ ಬದಾಮಿ, ಸದಸ್ಯ ಶಾಂತಾ ಮೇಲಿನಮನಿ, ಮೈನು ಧನ್ನೂರ, ಬಸವರಾಜ ಗೊಣ್ಣಾಗರ, ಶೇಖರಪ್ಪ ಬಾದವಾಡಗಿ, ಮಹಾಂತಪ್ಪ ಪಲ್ಲೇದ, ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಹೊಸೂರ, ಸಂಗಪ್ಪ ಹೂಲಗೇರಿ ಇತರರು ಇದ್ದರು. ಬಿಇಒ ಜಾಸ್ಮಿನ್ ಕಿಲ್ಲೇದಾರ ಸ್ವಾಗತಿಸಿದರು. ಸಂಗಮೇಶ ಹೊದ್ಲೂರ ನಿರೂಪಿಸಿದರು. ಎಸ್.ಟಿ. ಪೈಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net