ಪಕ್ಷ ಸಂಘಟಿಸಿದ ಮಹನೀಯರ ಸ್ಮರಿಸೋಣ

Let's remember the great men who organized the party.
ಬಾದಾಮಿ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲಾಯಿತು. ನಾಗರಾಜ ಕಾಚಟ್ಟಿ, ಶಿವನಗೌಡ ಸುಂಕದ, ಹೊನ್ನಯ್ಯ ಹಿರೇಮಠ, ಮಹಾಂತೇಶ ತಳವಾರ, ಹುಚ್ಚಪ್ಪ ಬೆಳ್ಳಿಗುಂಡಿ ಮತ್ತಿತರರಿದ್ದಾರೆ.
Published on

ಬಾದಾಮಿ: ದೇಶಾಭಿಮಾನ ಮೈಗೂಡಿಸಿಕೊಂಡು ಸ್ಥಾಪಿತವಾದ ಬಿಜೆಪಿ ಇಂದು ಕೇಂದ್ರದಲ್ಲಿ ಚುಕ್ಕಾಣಿ ಹಿಡಿದು ಜನಪರ ಯೋಜನೆಗಳ ಮೂಲಕ ದೇಶ ವಿದೇಶದಲ್ಲಿ ಗುಣಗಾನ ಮಾಡಿಸಿಕೊಳ್ಳುತ್ತಿದೆ ಎಂದು ಪಕ್ಷದ ಮಂಡಲ ಅಧ್ಯಕ್ಷ ನಾಗರಾಜ ಕಾಚಟ್ಟಿ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪಕ್ಷ ಸ್ಥಾಪನೆ ಮಾಡಿ ದೇಶದ ಉದ್ದಗಲಕ್ಕೂ ಸಂಘಟಿಸುವಲ್ಲಿ ಹಲವಾರು ಮಹನೀಯರು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಅದನ್ನು ನಾವು ಸ್ಮರಿಸಿಕೊಳ್ಳಬೇಕು. ಪಕ್ಷದ ನೇತೃತ್ವ ವಹಿಸಿರುವ ಮಹನೀಯರು ಇಂದಿಗೂ ಹಿರಿಯರ ಮಾರ್ಗದಲ್ಲಿ ನಡೆದು ದೇಶ ಮತ್ತು ದೇಶಾಭಿಮಾನಕ್ಕೆ ಹಗಲಿರುಳು ಕಾರ್ಯನಿರ್ವಹಿಸುತ್ತಿರುವುದು ನಮಗೆ ಮುನ್ನುಡಿಯಾಗಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಸುಂಕದ, ಹೊನ್ನಯ್ಯ ಹಿರೇಮಠ ಮಾತನಾಡಿದರು.

ಮಾಗುಂಡಪ್ಪ ನೋಟಗಾರ, ಹರೀಶ ಕೆರಿಹೊಲದ, ಬೇಲೂರಪ್ಪ ವಡ್ಡರ, ಸಂದೇಶ ರಾಯ್ಕರ, ಅರ್ಜುನ ಪೂಜಾರಿ, ರಂಗಪ್ಪ ಕೊಳ್ಳನ್ನವರ, ಹುಚ್ಚಪ್ಪ ಬೆಳ್ಳಿಗುಂಡಿ, ಮಹಾಂತೇಶ ತಳವಾರ, ರಾಘು ದಾಯಪೂಲೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net