

ತಿಕೋಟಾ: ಬ್ರಿಟಿಷರ ದಾಸ್ಯದಿಂದ ದೇಶವನ್ನು ಬಿಡಿಸಿ ಸ್ವಾತಂತ್ರೃ ತಂದುಕೊಟ್ಟ ಮಹನೀಯರನ್ನು ನಾವೆಲ್ಲಾ ಸ್ಮರಿಸಬೇಕು ಎಂದು ತಹಸೀಲ್ದಾರ್ ಪ್ರಶಾಂತ ಚನಗೊಂಡ ಹೇಳಿದರು.
ಪಟ್ಟಣದ ವಾಡೆ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸೋಣ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಂವಿಧಾನದಡಿ ರಚಿತವಾಗಿರುವ ದೇಶದ ಕಾನೂನುಗಳು ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕು ಕಲ್ಪಿಸಿದೆ. ಹಲವು ಧರ್ಮದವರು ಪರಸ್ಪರ ಪ್ರೀತಿಯಿಂದ ಸಹಬಾಳ್ವೆ ನಡೆಸುವುದು ಭಾರತದಲ್ಲಿ ಮಾತ್ರ ಎಂದರು.
ತಾಪಂ ಇಒ ಬಸವರಾಜ ಐನಾಪುರ ಪ್ರತಿಜ್ಞಾ ವಿಧಿ ಬೋಧಿಸಿದರು. ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
ಪಪಂ ಮುಖ್ಯಾಧಿಕಾರಿ ಎಚ್.ಎ. ಡಾಲಾಯತ, ಗ್ರೇಡ್-2 ತಹಸೀಲ್ದಾರ್ ಎಸ್.ಎಚ್. ಅರಕೇರಿ, ಜಿ.ಎಸ್. ದೇಶಮುಖ, ಕೃಷಿ ಅಧಿಕಾರಿ ಟಿ.ಎನ್. ಸೋಲಾಪೂರಕರ, ತಾಪಂ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ರಾಮರಾವ ದೇಸಾಯಿ, ರಮೇಶ ಧರನಾಕರ, ಜಗದೀಶಗೌಡ ಪಾಟೀಲ, ರಾವತ ಕಂಬಾರ, ಹಾಜಿಲಾಲ ಬಾಗವಾನ, ಬಸಯ್ಯ ವಿಭೂತಿ, ಲೇಪು ಕೊಣ್ಣೂರ, ಚಂದು ತೂರವಿ, ರಾಜೇಂದ್ರ ಕುಲಕರ್ಣಿ, ಭೀಮಣ್ಣಗೌಡ ಪಾಟೀಲ, ಆರ್.ಜಿ. ಯರನಾಳ ಇತರರಿದ್ದರು.