ಬೀದಿ ನಾಟಕಗಳಿಂದ ಜಾಗೃತಿ ಮೂಡಿಸಲಿ

16RAM2
Published on

ರಾಮದುರ್ಗ: ಜನರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕಗಳ ಮೂಲಕ ಸ್ವಚ್ಛ ಭಾರತ ಅಭಿಯಾನ, ಬಯಲುಮುಕ್ತ ಶೌಚಗೃಹ, ದುಶ್ಚಟದಿಂದ ಮುಕ್ತಿ ಸೇರಿ ಅನೇಕ ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಾರಿಗೆ ತಂದಿದೆ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಚ್​.ಆರ್​.ಲವಕುಮಾರ ಹೇಳಿದರು.

ಪಟ್ಟಣದ ಬಾಣಕಾರ ಪೇಟೆಯಲ್ಲಿ ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ. ಟ್ರಸ್ಟ್​ ಬುಧವಾರ ಹಮ್ಮಿಕೊಂಡಿದ್ದ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಥೆ ನೇರವಾಗಿ ಹಣಕಾಸು ವ್ಯವಹಾರ ನಡೆಸುತ್ತಿಲ್ಲ. ಅದು ಬ್ಯಾಂಕ್​ ಆ್​ ಮಹಾರಾಷ್ಟ್ರ ಮೂಲಕ ಜನರಿಗೆ ಆರ್ಥಿಕ ನೆರವು ನೀಡುವ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆರ್ಥಿಕತೆ ಸುಧಾರಿಸುವಲ್ಲಿ ಹಲವಾರು ಯೋಜನೆ ಹಮ್ಮಿಕೊಂಡಿದೆ ಎಂದರು.

ಜಾನಪದ ಕಲಾವಿದ ಸಿದ್ದು ಮೋಟೆ ಮಾತನಾಡಿ, ಬೀದಿ ನಾಟಕಗಳತ್ತ ಒಲವು ತೋರುತ್ತಿರುವುದು ಜಾನಪದ ಕಲಾವಿದರಿಗೆ ಪುನರ್ಜನ್ಮ ನೀಡಿದಂತೆ. ಅಧುನಿಕ ಭರಾಟೆಯಲ್ಲಿ ಪ್ರಾಚಿನ ಕಲೆ, ಸಂಸತಿ ಮರುಕಳಿಸಲಿ ಎಂದರು. ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯ ಅಶೋಕ ಕುಲಗೋಡ, ಸದಸ್ಯರಾದ ಜಿ.ಬಿ.ರಂಗನಗೌಡ್ರ, ರಮೇಶ ಜಲಗೇರಿ, ಪಿ.ಆರ್​.ಸೂಳಿಭಾಂವಿ, ದತ್ತಾ ನಾಯಕ, ಹನುಮಂತ ದಾಸರ, ರಾಮಚಂದ್ರ ಯಾದವಾಡ, ರೇಣುಕಾ ರಾವಳ, ನಿರ್ಮಲಾ ರಾವಳ, ಮಂಜುಳಾ ರಾಯ್ಕರ ಇತರರಿದ್ದರು. ತಾಲೂಕು ಯೋಜನಾಧಿಕಾರಿ ಸಚಿನ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಬಸಪ್ಪ ನಿರೂಪಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುನಿತಾ ಬಡಿಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net