ದೇಶದ ಸಂಸ್ಕೃತಿಯ ಅರಿವು ಮೂಡಿಸೋಣ

ದೇಶದ ಸಂಸ್ಕೃತಿಯ ಅರಿವು ಮೂಡಿಸೋಣ
Published on

ಹಾಸನ: ಗಿಡ ನೆಡುವುದು ಸಂಪ್ರದಾಯವಾಗಬೇಕು. ಈಗಿನ ಜನಾಂಗಕ್ಕೆ ಮೌಲ್ಯಾಧಾರಿತ ಶಿಕ್ಷಣದ ಜತೆಗೆ ದೇಶದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸುರೇಶ್ ಮೋಹ್ಲಿ ಹೇಳಿದರು.

ತಾಲೂಕಿನ ಗೌರಿಕೊಪ್ಪಲು ಗ್ರಾಮದ ಆದಿಚುಂಚನಗಿರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿರಿಯರಿಂದ ಬಳುವಳಿಯಾಗಿ ಬಂದ ಭೂಮಿಯನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಹೆಚ್ಚಾಗಿ ಮರ, ಗಿಡಗಳನ್ನು ಬೆಳೆಸುವುದರ ಜತೆಗೆ ನೀರಿನ ಮಿತಬಳಕೆ ಮಾಡುವುದು ಹಾಗೂ ಪರಿಸರ ಸಂರಕ್ಷಣೆಗೆ ಒತ್ತು ನೀಡುವಂತೆ ಕರೆ ನೀಡಿದರು.

ಮಣ್ಣಿಗೆ ರಾಸಾಯನಿಕ ಬಳಕೆ ಹಾಗೂ ಪ್ಲಾಸ್ಟಿಕ್ ಉಪಯೋಗ ಕಡಿಮೆ ಮಾಡುವಂತೆ ಕರೆ ನೀಡಿದರು. ಶಾಲೆಯ ಮುಖ್ಯಶಿಕ್ಷಕ ಬಾಲಕೃಷ್ಣ, ತಾಲೂಕು ಯೋಜನಾಧಿಕಾರಿ ಧನಂಜಯ, ರಂಗೆಗೌಡ, ಭಾಗ್ಯಲಕ್ಷ್ಮೀ, ಚಂದ್ರಪ್ರಭ, ಸೇವಾ ಪ್ರತಿನಿಧಿ ವಿಜಯಲಕ್ಷ್ಮೀ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net