ಯುವಕರಲ್ಲಿ ರಕ್ತದಾನದ ಪ್ರಜ್ಞೆ ಬೆಳೆಸಲಿ

FotoJet
Published on

 ನಗರ ಸಂಚಾರ ಠಾಣೆಯ ಪಿಎಸ್‌ಐ ಬಸವರಾಜು ಸಲಹೆ

 ಚನ್ನಪಟ್ಟಣ : ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿ, ರಕ್ತದಾನದ ಪ್ರಜ್ಞೆ ಬೆಳೆಸಬೇಕೆಂದು ನಗರ ಸಂಚಾರ ಠಾಣೆಯ ಪಿಎಸ್‌ಐ ಬಸವರಾಜು ತಿಳಿಸಿದರು.

ನಗರದ ಜ್ಞಾನಸರೋವರ ಕಾಲೇಜು ಆವರಣದಲ್ಲಿ ರೋಟರಿ ಟಾಯ್ಸ್ ಸಿಟಿ ಹಾಗೂ ಜ್ಞಾನಸರೋವರ ಕಾಲೇಜು ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಬಹಳ ಪುಣ್ಯದ ಕೆಲಸ. ಒಬ್ಬರ ರಕ್ತದಾನದಿಂದ 3 ಮಂದಿಯ ಜೀವ ಉಳಿಸಬಹುದಾಗಿದೆ. ಪ್ರತಿನಿತ್ಯ ರಕ್ತದ ಅಗತ್ಯ ಇರುತ್ತದೆ. ಆದರೆ, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವವರ ಕೊರತೆಯಿಂದಾಗಿ ರಕ್ತದ ಕೊರತೆ ಬಹಳ ಕಾಡುತ್ತಿದೆ. ಜನರಲ್ಲಿ ರಕ್ತದಾನ ಕುರಿತು ಇರುವ ತಪ್ಪು ಕಲ್ಪನೆಯನ್ನು ದೂರ ಮಾಡಬೇಕಾಗಿದೆ ಎಂದರು.

ಪುರ ಠಾಣೆಯ ಪಿಎಸ್‌ಐ ಹರೀಶ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಗಳಾಗಿದ್ದರೂ ಸಾಕಷ್ಟು ಮಂದಿಯಲ್ಲಿ ರಕ್ತದಾನ ಕುರಿತು ತಪ್ಪು ಕಲ್ಪನೆಗಳಿವೆ. ರಕ್ತದಾನಕ್ಕಿಂತ ಮಿಗಿಲಾದ ದಾನವಿಲ್ಲ. ಯುವಜನತೆಗೆ ರಕ್ತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಜೀವ ಉಳಿಸುವ ಮಾನವೀಯ ಕೆಲಸದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಬೇಕು. ರಕ್ತದಾನ ವೈಯುಕ್ತಿಕ ಆರೋಗ್ಯಕ್ಕೂ ಸಹಕಾರಯಾಗಿದೆ. ಯುವ ಜನತೆ ಸಾಮಾಜಿಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಬದುಕು ರೂಪಿಸಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ 50 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net