ಪ್ಲಾಸ್ಟಿಕ್‌ಮುಕ್ತ ಅಭಿಯಾನದ ಅರಿವು ಮೂಡಿಸಲಿ

6Tlr1
Published on

ತಲ್ಲೂರ: ಮನುಷ್ಯನ ಆರೋಗ್ಯ ರಕ್ಷಣೆಗೆ ಗುಣಮಟ್ಟದ ಆಹಾರ, ಉತ್ತಮ ವಾತಾವರಣ ಹಾಗೂ ಶುದ್ಧ ನೀರು ದೊರೆಯಲು ಪರಿಸರ ಸಂರಕ್ಷಿಸುವ ಅವಶ್ಯವಿದೆ ಎಂದು ಸವದತ್ತಿ ತಾಪಂ ಇಒ ಆನಂದ ಬಡಕುಂದ್ರಿ ಹೇಳಿದರು.

ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸಿ ಚಾಲನೆ ನೀಡಿ ಮಾತನಾಡಿದರು. ಗ್ರಾಪಂ ಕಾರ್ಯದರ್ಶಿ ಸತೀಶ ಬಡಿಗೇರ ಮಾತನಾಡಿದರು.

ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ರಾಮಪ್ಪ ರಕ್ಕಸಗಿ, ಮುಖ್ಯಶಿಕ್ಷಕ ಡಿ.ಡಿ. ಭೋವಿ, ಎಸ್.ಎಂ. ಮಾಳೈನವರ, ಎಸ್.ಎಂ. ಹಂಜಿ, ಎಸ್.ಎ್. ಮುರಗನ್ನವರ, ಎಂ.ಎ. ಬಸರಿಮರದ, ಆರ್.ಎಚ್. ಅತ್ತಾರ, ಲಕ್ಷ್ಮೀ ರಾಯಣ್ಣವರ, ವಿಜಯಲಕ್ಷ್ಮೀ ಕಳಸಣ್ಣವರ, ಎ.ಎ. ಮಾನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net