

ರೋಣ: ಮಾದಕ ವಸ್ತು ಸೇವನೆಯಿಂದ ಜೀವನ ಹಾಳಾಗುತ್ತದೆ. ಯುವಕರು ಮಾದಕ ವಸ್ತು ಸೇವನೆ ತ್ಯಜಿಸಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಧರ್ಮಸ್ಥಳ ಸ್ವ ಸಹಾಯ ಸಂಘದ ತಾಲೂಕು ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ರೋಣ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಗದಗ ಹಾಗೂ ಸಂಗಮೇಶ್ವರ ಪ್ರೌಢಶಾಲೆ ಸವಡಿ ಮತ್ತು ಸ್ವ- ಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವೈದ್ಯ ವೀರೇಶ ಸತ್ತಿಗೇರಿ, ಇಂದಿನ ಯುವಕರು ಮಾದಕ ವಸ್ತು ಸೇವನೆ ಬಿಟ್ಟು, ಆರೋಗ್ಯ ಕಾಪಾಡಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ತಂಬಾಕು, ಬೀಡಿ, ಸಿಗರೇಟು, ಗುಟ್ಖಾ, ಮದ್ಯಸೇವನೆಯಿಂದಾಗುವ ಹಾನಿಯ ಕುರಿತು ತಿಳಿಸಿದರು.
ಮುಖ್ಯ ಶಿಕ್ಷಕ ಎಸ್.ಯು. ಧನವಂತರ, ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಶಿಕ್ಷಕರು, ವಲಯದ ಸೇವಾ ಪ್ರತಿನಿಧಿಗಳಾದ ಕವಿತಾ ಹೂಗಾರ, ಮಂಜುನಾಥ ಬಳಗರ, ಸವಡಿ ವಲಯದ ಮೇಲ್ವಿಚಾರಕರಾದ ಖಾದರ ಬಡಿಗೇರ, ಬಿ.ಸಿ.ಗುಳೇದ ಇದ್ದರು.
ಫೋಟೋ- 3 ರೋಣ- 2
ಸವಡಿ ಗ್ರಾಮದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತು ಸೇವನೆ ವಿರೋಧಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮಹಾಬಲೇಶ್ವರ ಪಟಗಾರ, ಡಾ. ವಿರೇಶ ಸತ್ತಿಗೇರಿ, ಎಸ್.ಯು. ಧನವಂತರ, ಕವಿತಾ ಹೂಗಾರ, ಮಂಜುನಾಥ ಬಳಗರ ಇತರರು ಇದ್ದರು.