

ವಿಜಯಪುರ: ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಽಸಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಽ ಧರಣಿ ಸತ್ಯಾಗ್ರಹ ಭಾನುವಾರ ೩೯ನೇ ದಿನ ಪೂರೈಸಿತು.
ಮುದ್ದೇಬಿಹಾಳದ ಹಿರಿಯ ಪತ್ರಕರ್ತ, ಬಂಜಾರ ಸಮಾಜದ ಹಿರಿಯ ಮುಖಂಡ ಎಸ್.ಪಿ. ಸೇವಾಲಾಲ ಹೋರಾಟಕ್ಕೆ ಬೆಂಬಲ ಸೂಚಿಸಿ, ಎಲ್ಲ ಮೂಲ ಸೌಕರ್ಯಗಳನ್ನು ಇಲ್ಲಿನ ಜಿಲ್ಲಾಸ್ಪತ್ರೆ ಹೊಂದಿದ್ದು, ಸರ್ಕಾರ ಏಕೆ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿದೆ ಎಂದು ಪ್ರಶ್ನಿಸಿದರು. ಸ್ಥಳೀಯ ಜನಪ್ರತಿನಿಽಗಳೆಲ್ಲ ಒಗ್ಗೂಡಿ ಜಿ¯್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮೇಲೆ ಒತ್ತಡ ಹೇರಬೇಕೆಂದು ತಿಳಿಸಿದರು.
ಪಿಪಿಪಿ ಮಾದರಿ ಸಂಪೂರ್ಣ ರದ್ದತಿಯಾಗಬೇಕು. ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಖಾಸಗಿ ಕಂಪನಿಗಳ ಸುಪರ್ದಿಗೆ ವಹಿಸುವ ಯೋಜನೆ ತಕ್ಷಣ ಬಿಡಬೇಕು. ಇಂದು ಬಡವರ ಚಿಕಿತ್ಸೆ ದುಬಾರಿಯಾಗಿಸಿ, ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದರು.
೩೯ ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಇದು ಹೀಗೆ ಮುಂದುವರಿದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಅಲ್ಲದೆ, ಧರಣಗೆ ಈಗಾಗಲೇ ವಿವಿಧ ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದು, ಈ ಹೋರಾಟ ಒಂದು ಕಾಲೇಜಿನದ್ದು ಮಾತ್ರವಲ್ಲ, ಬದಲಾಗಿ ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಭವಿಷ್ಯದ ಪ್ರಶ್ನೆಯಾಗಿದೆ ಎಂದರು.
ಪಿಪಿಪಿ ಬೇಡ, ಸರ್ಕಾರಿ ಆರೋಗ್ಯ ಬೇಕು! ವಿಜಯಪುರ ಕಾಲೇಜು ನಮ್ಮದು, ಖಾಸಗಿಗೆ ಬಿಡೋದಿಲ್ಲ ಎಂಬ ಘೋಷಣೆಗಳು ಮೊಳಗಿದವು.
ಸಮಾಜದ ಮುಖಂಡರಾದ ಟಿ.ಕೆ. ಚವಾಣ, ಪವನ ಸಿ., ಸಿ.ಎಂ. ನಾಯಕ, ಡಿ.ಕೆ. ನಾಯಕ, ಡಿ.ಕೆ. ಲಮಾಣಿ, ಎನ್.ಜಿ. ನಾಯಕ, ಸುನೀಲ ಚವಾಣ, ಹೋರಾಟ ಸಮಿತಿ ಸದ್ಯಸ್ಯರಾದ ಅಕ್ರಮ ಮಾಶಾಳ್ಕರ, ಸಿದ್ಧಲಿಂಗ ಬಾಗೇವಾಡಿ, ಸುರೇಶ ಬಿಜಾಪುರ, ಸುರೇಶ ಜೀಬಿ, ಕಿರಣ ಮೇಲಿನಕೇರಿ, ಭರತಕುಮಾರ ಎಚ್.ಟಿ., ಎಂ.ಎ. ಇಂಡೀಕರ, ಜಾವೇದ್ ಅಗಸ್ಬಾಳ, ಸಂಜು ಶೆಟಗಾರ, ಜಗದೇವ ಸೂರ್ಯವಂಶಿ, ಮಲ್ಲಿಕಾರ್ಜುನ ಬಟಗಿ, ಅನಿಲ ಹೊಸಮನಿ, ಶ್ರೀನಾಥ ಪೂಜಾರಿ, ಚನ್ನು ಕಟ್ಟಿಮನಿ, ಶ್ರೀಕಾಂತ ಕೊಂಡಗುಳಿ, ಶಿವಬಾಳಮ್ಮ ಕೊಂಡಗುಳಿ, ಹಂದ್ರಾಳ, ನಾಗೇಶ ಪೂಜಾರಿ, ಸಲೀಂ ಹಕರಾಣಿ, ಲಾಯಪ್ಪ ಇಹಾಳೆ, ಕಾವೇರಿ ರಜಪೂತ ಮತ್ತಿತರರಿದ್ದರು.