ನದಿಯ ಶುದ್ಧತೆಯನ್ನು ಕಾಪಾಡೋಣ

25 MANJU 04
ಹೊಸಪೇಟೆ ಕೊಟ್ಟೂರು ಸ್ವಾಮಿ ಮಠದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಕರಪತ್ರ ಬಿಡುಗಡೆ ಮಾಡಲಾಯಿತು. ಪ್ರಮುಖರಾದ ಪಿ.ವೆಂಕಟೇಶ್, ಗುಜ್ಜಲ್ ಗಣೇಶ್, ಗಂಟೆ ಸೋಮಶೇಖರ್, ಮಂಜುನಾಥ, ಗುಂಡಿ ರಾಘವೇಂದ್ರ ಇತರರಿದ್ದರು.
Published on

ಹೊಸಪೇಟೆ: ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ನಿಮಿತ್ತ ಪೂರ್ವಭಾವಿ ಸಭೆ ಬುಧವಾರ ನಡೆಯಿತು.

ಅಭಿಯಾನದ ಸಂಚಾಲಕ ಬಸವರಾಜ ಪಾಟೀಲ್ ವೀರಾಪುರ ಮಾತನಾಡಿ, ನಿರ್ಮಲ ತುಂಗಭದ್ರಾ ಅಭಿಯಾನ ಬೃಹತ್ ಜಲ ಜಾಗೃತಿ-ಜನಜಾಗೃತಿ ಪಾದಯಾತ್ರೆಯಲ್ಲಿ ನಾವೆಲ್ಲರೂ ತನು ಮನದಿಂದ ಹೆಜ್ಜೆ ಹಾಕೋಣ. ಜೀವನದಿ ಸಂರಕ್ಷಿಸೋಣ ಎಂದರು.

ಶೃಂಗೇರಿಯಿಂದ ಕಿಷ್ಕಿಂದಾ ತನಕ ನದಿಯ ಶುದ್ಧತೆ ಮತ್ತು ಪವಿತ್ರತೆ ಕಾಪಾಡಲು ನಿಶ್ಚಿಯಿಸಿದ್ದು ಇದರ ನಿಮಿತ್ತ ನ.6ರ ಬುಧವಾರದಿಂದ ಬೃಹತ್ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆ ಪ್ರಾರಂಭಗೊಂಡಿದೆ. ತುಂಗಭದ್ರಾ ನದಿ ಪಾತ್ರದ ಪರಿಸರಾಸಕ್ತರು, ಸಾಧು-ಸಂತರು, ವಿದ್ಯಾರ್ಥಿಗಳು, ರೈತರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ಈ ಅಭಿಯಾನದಲ್ಲಿ ಭಾಗವಹಿಸೋಣ ಎಂದರು.

ಪ್ರಮುಖರಾದ ಪಿ.ವೆಂಕಟೇಶ, ಗುಜ್ಜಲ್ ಗಣೇಶ್, ಗಂಟೆ ಸೋಮಶೇಖರ್, ಮಂಜುನಾಥ, ಗುಂಡಿ ರಾಘವೇಂದ್ರ, ಗುಂಡಿ ರಮೇಶ್, ದಾದಾಖಲಂದರ್ (ಗುಜ್ಜಲ್), ಮಲ್ಲಿಕಾರ್ಜುನ ಮೇಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net