ಕ್ರೀಡಾ ಮನೋಭಾವದಿಂದ ಆಟವಾಡಲಿ

31Rayabag60
Published on

ರಾಯಬಾಗ: ಆಟಗಾರರು ಕ್ರೀಡಾ ಮನೋಭಾವ ಹೊಂದಿರಬೇಕು ಎಂದು ಗಜಾನನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಜೀವಕುಮಾರ ಬಾನೆಸರಕಾರ ಹೇಳಿದರು.

ತಾಲೂಕಿನ ಮೊರಬ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಉಪ ನಿರ್ದೇಶಕರು, ಶಾಲಾ ಶಿಕ್ಷಣ (ಪದವಿಪೂರ್ವ) ಚಿಕ್ಕೋಡಿ ಹಾಗೂ ಎಸ್.ಆರ್.ಬಾನೆಸರಕಾರ ಪದವಿಪೂರ್ವ ಕಾಲೇಜ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಸದೃಢರಾಗಲು ಸಾಧ್ಯ. ನಿರ್ಣಾಯಕರು ಯಾವುದೇ ತಾರತಮ್ಯ ಮಾಡದೇ ನಿರ್ಣಯ ನೀಡಬೇಕು ಎಂದರು.

ಡಿ.ಎಸ್.ನಾಯಿಕ, ಎನ್.ಎಸ್.ಚೌಗಲಾ, ಡಾ.ಸಿ.ಬಿ.ಕುಲಗೋಡ, ಅಶೋಕ ಕೊಪ್ಪದ, ಕುಮಾರ ಕಾನಡೆ, ಐ.ಕೆ.ಅಕಿವಾಟ, ದಾದಪ್ಪ ರಾಮತೀರ್ಥ, ರುದ್ರೇಶ ಅಸೋದೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net