ತಾಯಿ ಹೆಸರಿನಲ್ಲಿ ಸಸಿ ನೆಡಲಿ

14Huk1
Published on

ಹುಕ್ಕೇರಿ: ತಾಯಿ ಹೆಸರಿನಲ್ಲಿ ಸಸಿ ನೆಟ್ಟು ಅದನ್ನು ಬೆಳೆಸಲು ಮತ್ತು ಪರಿಸರ ಉಳಿಸಲು ನೇರಲಿ ಪಿಕೆಪಿಎಸ್ ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ತಾಲೂಕಿನ ನೇರಲಿ ಗ್ರಾಮದ ಪಿಕೆಪಿಎಸ್‌ನಿಂದ ‘ಏಕ ಪೇಡ್ ಮಾ ಕೆ ನಾಮ’ ಅಡಿ ಶುಕ್ರವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಯಿಯನ್ನು ದೇವರ ಸಮಾನವಾಗಿ ಕಾಣುತ್ತೇವೆ. ಹಾಗಾಗಿ ಅವರ ಹೆಸರಿನಲ್ಲಿ ಸಸಿ ನೆಟ್ಟರೆ ಅದರ ಕುರಿತು ಕಾಳಜಿ ವಹಿಸುತ್ತೇವೆ. ಹಾಗಾಗಿ ಇಂತಹ ಒಳ್ಳೆಯ ಯೋಜನೆ ಪ್ರತಿ ಗ್ರಾಮದಲ್ಲಿ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ನಿಖಿಲ ಕತ್ತಿ ಮಾತನಾಡಿ, ನಮ್ಮ ತಂದೆ ದಿ.ಉಮೇಶ ಕತ್ತಿ ಅರಣ್ಯ ಸಚಿವರಿದ್ದಾಗ ರಾಜ್ಯದಲ್ಲಿ ಶೇ.35 ಅರಣ್ಯ ಉಳಿಸಿ ಬೆಳೆಸುವ ಸಂಕಲ್ಪ ಇಟ್ಟುಕೊಂಡಿದ್ದರು. ಎಲ್ಲರೂ ಸಸಿ ನೆಟ್ಟು ಪೋಷಿಸುವ ಮೂಲಕ ಅವರ ಕನಸನ್ನು ನನಸು ಮಾಡಬೇಕು. ಗ್ರಾಮೀಣ ಜನರ ಜೀವನಾಡಿಯಾಗಿರುವ ಸಹಕಾರ ಸಂಘಗಳು ರೈತರಿಗೆ ಪರಿಸರ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರು.

ಸನ್ಮಾನ ಕಾರ್ಯಕ್ರಮ ಜರುಗಿತು. ಸಂಘದ ಅಧ್ಯಕ್ಷ ರುದ್ರಗೌಡ ಪಾಟೀಲ, ಉಪಾಧ್ಯಕ್ಷ ಬಸವಪ್ರಸಾದ ಸಂಕಪಾಳ, ನಿರ್ದೇಶಕರಾದ ಎಸ್.ಕೆ.ಹುಕ್ಕೇರಿ, ಮಧುಕರ ಖೋತ, ಈರಪ್ಪ ಲಬ್ಬಿ, ಆಕಾಶ ಗುರವ, ಶೋಭಾ ಕಲ್ಲೋಳಿಮಠ, ಗಾಯತ್ರಿ ಹೊಸಗೌಡ, ಸುನೀಲ ಹೊಸಮನಿ, ಅಪ್ಪಾಸಾಹೇಬ ಪಾಟೀಲ, ಅಣ್ಣಾಗೌಡ ಪಾಟೀಲ, ಮಾಜಿ ಅಧ್ಯಕ್ಷ ಈಶ್ವರ ಖೋತ, ಶಶಿಕಲಾ ಪಾಟೀಲ, ಡಿಸಿಸಿ ತಾಲೂಕಾ ನಿಯಂತ್ರಣಾಧಿಕಾರಿ ಮಹಾಂತೇಶ ಕೋಟಗಿ, ಸೈದಪ್ಪ ಗದಾಡಿ, ಬ್ಯಾಂಕ್ ನಿರೀಕ್ಷಕ ಕೆಂಪಯ್ಯ ಗವಿಮಠ, ಸಿಇಒ ರಾಮಪ್ಪ ಶಿಂಧೆ ಇತರರು ಇದ್ದರು. ವಕೀಲ ಬಸವಪ್ರಸಾದ ಸಂಕಪಾಳ ಸ್ವಾಗತಿಸಿದರು. ರಾಮಪ್ಪ ಶಿಂಧೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net