ಆರೋಗ್ಯದ ಕಡೆಗೂ ಗಮನ ವಹಿಸಲಿ

Software: Microsoft Office
Software: Microsoft Office
Published on

ಬೆಳಗಾವಿ: ಇಂದಿನ ಒತ್ತಡದ ಜೀವನದಲ್ಲಿ ಮಹಿಳೆಯರು ಕೂಡ ಸಾಕಷ್ಟು ಸಾಧನೆ ಮಾಡುತ್ತಿದ್ದು, ಕೆಲಸದ ಜತೆಗೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ನಗರದ ಪ್ರಸಿದಟಛಿ ಸಿಣಉರೋಗ ತಜ್ಞೆ ಡಾ.ಸೌಭಾಗ್ಯ ಭಟ್​ ಸಲಹೆ ನೀಡಿದರು.

ನಗರದ ತಿಲಕವಾಡಿಯ ಐಸಿಎಐ ಭವನದ ಶಿವನಾಗಿ&ಮರಾಠೆ ಸಭಾಂಗಣದಲ್ಲಿ ಮಂಗಳವಾರ ಭಾರತೀಯ ಚಾರ್ಟ್​ರ್ಡ್​ ಅಕೌಂಟಂಟ್ಸ್​ ಸಂಸ್ಥೆಯ ಶಾಖೆ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಚಾರ್ಟ್​ರ್ಡ್​ ಅಕೌಂಟಂಟ್ಸ್​ ಸಂಸ್ಥೆಯ ಅಧ್ಯ ವೀರಣ್ಣ ಮುರಗೋಡ ಮಾತನಾಡಿ, ಪ್ರತಿಯೊಂದು ೇತ್ರದಲ್ಲೂ ಮಹಿಳೆ ಮುಂದುವರಿಯುತ್ತಿದ್ದು, ದೇಶದ ಅಭಿವೃದಿಟಛಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಸಿಎ ಜ್ಯೋತಿ ಮಠದ 35 ವರ್ಷಗಳ ವೃತ್ತಿಪರ ಜೀವನ ಅನುಭವ ಹಂಚಿಕೊಂಡರು. ವ್ಯವಸ್ಥಾಪಕ ಸಮಿತಿ ಸದಸ್ಯ ಸಿಎ ಅನಿಲ್​ ರಾಮದುರ್ಗ, ಪ್ರಸಾದ ಸೋಲಾಪುರಮಠ, ಗೌರಿ ನಾಯಕ, ಸಿಎ ಅಸೋಸಿಯೇಷನ್​ ಅಧ್ಯೆ ನಿಖಿತಾ ಅಸುಂಡಿ ಇತರರಿದ್ದರು. ವನಿತಾ ಬಿರ್ಜೆ ನಿರೂಪಿಸಿದರು, ಸಂಜೀವ ದೇಶಪಾಂಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net