ಸಂಚಾರ ನಿಯಮ ಪಾಲನೆಯಾಗಲಿ

30ckd1
Published on

ಚಿಕ್ಕೋಡಿ: ಚಾಲಕರು ತರಬೇತಿ ಪಡೆದುಕೊಳ್ಳಬೇಕು. ಅಂದಾಗ ಮಾತ್ರ ರಸ್ತೆ ಅಪಘಾತ ತಪ್ಪಿಸಬಹುದು ಎಂದು ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಎಸ್.ಎಂ.ಕಮತಗಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲೂಕು ವಾಹನ ಚಾಲನಾ ತರಬೇತಿ ಮಾಲೀಕರ ಸಂಘದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಚಾಲನಾ ಶಾಲಾ ದಿನಾಚರಣೆಗೆ ಚಾಲನೆ ನೀಡಿ, ಚಾಲಕರು ಶಿಸ್ತು, ನಿಯಮ ಪಾಲನೆ ಹಾಗೂ ಲೈಸನ್ಸ್ ಪ್ರಕ್ರಿಯೆ ಅನುಸರಿಸಬೇಕು ಎಂದರು.

ತಾಲೂಕು ವಾಹನ ಚಾಲನಾ ತರಬೇತಿ ಮಾಲೀಕರ ಸಂಘದ ಅಧ್ಯಕ್ಷ ಎಂ.ಆರ್.ಮುನ್ನೋಳಿಕರ ಮಾತನಾಡಿದರು.

ನಿಯಾಜ್ ಬುಡೇಖಾನ್, ವಿನಯ ಚೌಗಲಾ, ರಾಜು ಚಂದಗಡೆ, ಆಸೀಫ್ ಶೇಖ್, ಜಾವೀದ್ ಘಾಲವಾಡೆ, ಭಜರಂಗ ಮೊರೆ, ಸ್ವಪ್ನಿಲ್ ಅವಳೆಕರ, ಅಮಿತ್ ಬಾಳ್ನಾಯಿಕ್, ಗೌರಿಶಂಕರ ಹಿರೇಮಠ, ಸೂರಜ ನಾರೆ, ಮಾರುತಿ ಮಾಳಿ, ಸಾಗರ ಜನವಾಡೆ, ಶಫೀಕ್ ಕಂಕಣವಾಡಿ, ಸಂಜು ಲಠ್ಠೆ, ಪ್ರಶಾಂತ ಕುಷ್ಟಗಿ, ಮಹಾಂತೇಶ ಮಾಳಿ, ಸಚಿನ ಬುಬನಾಳೆ, ಜ್ಯೋತಿರಾಮ ಪವಾರ, ರಾಜು ಚಂದಗಡೆ, ವಿನಯ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net