

ರಾಮದುರ್ಗ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ. ಗಿಡ-ಮರ ಪೋಷಣೆಯಿಂದ ಮುಂದಿನ ತಲೆಮಾರಿಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಧಗ್ರಾಯೋ ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ ಹೇಳಿದರು.
ತಾಲೂಕಿನ ಆನೆಗುದ್ದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮಲ್ಲವ್ವ ಮಠಪತಿ ಮಾತನಾಡಿದರು. ಉಪಾಧ್ಯಕ್ಷ ಮಹಾಂತೇಶ ಜಾಧವ, ತಾಲೂಕು ಯೋಜನಾಧಿಕಾರಿ ಸಚಿನ್, ಮುಖಂಡ ಅಶೋಕ ಕುಲಗೋಡ, ಮುಖ್ಯಶಿಕ್ಷಕ ಶಂಭುಲಿಂಗ,
ಸೇವಾ ಪ್ರತಿನಿಧಿ ಮಂಜುಳಾ ಇತರರಿದ್ದರು. ವಲಯ ಮೇಲ್ವಿಚಾರಕ ಕೇಶವ ಸ್ವಾಗತಿಸಿದರು. ಶಿಕ್ಷಕ ಪ್ರಕಾಶ ನಿರೂಪಿಸಿದರು. ಕೃಷಿ ಅಧಿಕಾರಿ ಪ್ರದೀಪ ವಂದಿಸಿದರು.