ಶಿಬಿರದ ಸದುಪಯೋಗ ಪಡೆದುಕೊಳ್ಳಲಿ

summer camp
Published on

ಕಕ್ಕೇರಿ: ನಾವೆಲ್ಲರೂ ಶಾಲೆ ಕಲಿಯುವ ಸಂದರ್ಭದಲ್ಲಿ ಶಾಲೆಯ ಶುಲ್ಕ ಭರಿಸಲಾಗದೆ ಎಷ್ಟೋ ಸಹಪಾಠಿಗಳು ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಸೇರಿ ಅನರಸ್ಥರಾಗಿದ್ದಾರೆ ಎಂದು ಗ್ರಾಪಂ ಅಧ್ಯ ಕಾಶೀಮ್​ ಹಟ್ಟಿಹೊಳಿ ಹೇಳಿದರು. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ, ಗ್ರಾಪಂ ಲಿಂಗನಮಠ ಹಾಗೂ ಗ್ರಾಪಂ ಗ್ರಂಥಾಲಯ ಮಾಹಿತಿ ಮತ್ತು ಅರಿವು ಕೇಂದ್ರ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರ ಉಚಿತವಾಗಿ ನೀಡುತ್ತಿರುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು. ಗ್ರಂಥಾಲಯದ ಮೇಲ್ವಿಚಾರಕ ಪ್ರಕಾಶ ಭಜಂತ್ರಿ ಮಾತನಾಡಿದರು. ಗ್ರಾಪಂ ಉಪಾಧ್ಯೆ ಸರೋಜಾ ನಾಯಕ, ಗ್ರಾಪಂ ಅಭಿವದ್ಧಿ ಅಧಿಕಾರಿ ಕಾವೇರಿ ಹಿಮಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net