ಆಸ್ಪತ್ರೆ ಸದುಪಯೋಗ ಪಡಿಸಿಕೊಳ್ಳಲಿ

23blh1 udghatane
Published on

ಬೈಲಹೊಂಗಲ: ಕಣ್ಣಿನ ಚಿಕಿತ್ಸೆಗೆ ರಾಜ್ಯಾದ್ಯಂತ ಹೆಸರಾದ ಡಾ.ದಿಲೀಪ ಪಟವರ್ಧನ್ ಅವರ ಆಸ್ಪತ್ರೆ ಬೈಲಹೊಂಗಲದಲ್ಲೂ ಆರಂಭವಾಗಿದೆ. ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣ ಪಕ್ಕದ ಮೆಟಗುಡ್ಡ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ.ಪಟವರ್ಧನ್ ಅವರ ನಂದಾದೀಪ ಕಣ್ಣಿನ ಆಸ್ಪತ್ರೆಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಕಣ್ಣಿನ ಚಿಕಿತ್ಸೆಗಾಗಿ ದೂರದ ಪಟ್ಟಣಗಳಿಗೆ ತೆರಳುವ ಜನರಿಗೆ ಸ್ಥಳೀಯವಾಗಿಯೇ ಗುಣಮಟ್ಟದ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ ಎಂದರು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ನಗರ ಪ್ರದೇಶಗಳಲ್ಲಿ ದೊರೆಯುವ ಅತ್ಯಾಧುನಿಕ ಸೌಲಭ್ಯವನ್ನು ತಾಲೂಕು ಮಟ್ಟದಲ್ಲಿ ಕಲ್ಪಿಸಿರುವ ಡಾ.ದಿಲೀಪ್ ಅವರ ಕಾರ್ಯ ಶ್ಲಾಘನೀಯ ಎಂದರು. ಡಾ.ಜೂಸ್ಮಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ಆಸ್ಪತ್ರೆ ಆರಂಭದ ಹಿನ್ನೆಲೆಯಲ್ಲಿ ಕೆಲ ದಿನಗಳವರೆಗೆ ಕಣ್ಣಿನ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನಂದಾದೀಪ ಆಸ್ಪತ್ರೆ ಸಂಸ್ಥಾಪಕ ಡಾ.ದಿಲೀಪ ಪಟವರ್ಧನ್ ಮಾತನಾಡಿ, ಇಂದಿನ ಜೀವನ ಬಹಳಷ್ಟು ಸಂಕೀರ್ಣತೆಯಿಂದ ಕೂಡಿದೆ. ಗ್ಲೂಕೋಮಾ, ಕ್ಯಾಟರಾಕ್ಟ್, ಮ್ಯಾಕ್ಯುಲರ್, ಡಿಜೆನರೇಷನ್ ಸೇರಿ ವಿವಿಧ ಕಣ್ಣಿನ ರೋಗಗಳಿಗೆ ಈ ಆಸ್ಪತ್ರೆ ಅತ್ಯಾಧುನಿಕ ಚಿಕಿತ್ಸೆ ಒದಗಿಸಲಿದೆ. ಆಸ್ಪತ್ರೆ ಆರಂಭಿಸಲು ಸಹಕರಿಸಿದ ಪಟ್ಟಣದ ವೈದ್ಯ ಬಳಗವನ್ನು ಸ್ಮರಿಸಿ, ಯೋಗ್ಯದರದಲ್ಲಿ ಚಿಕಿತ್ಸೆ ಒದಗಿಸುವ ಭರವಸೆ ನೀಡಿದರು.

ಹೃದಯ ರೋಗ ತಜ್ಞ ಡಾ.ಬಿ.ಎಸ್.ಮಹಾಂತಶೆಟ್ಟಿ, ಡಾ.ಗೀತಾ ಕಾಂಬಳೆ, ಅರಣ್ಯಾಧಿಕಾರಿ ಸುರೇಶ ದೊಡ್ಡಬಸನ್ನವರ, ಬಸವರಾಜ ತೇಗೂರ, ಮಹೇಶ ಬೆಲ್ಲದ, ಮಹಾಂತೇಶ ಮೆಟಗುಡ್ಡ, ಮೋಹನ ಪಾಟೀಲ, ಡಾ.ಸೌರಭ ಪಟವರ್ಧನ್, ಕುಶಾಲ ಪಟವರ್ಧನ್, ಡಾ.ಮಹಾದೇವಿ ಪಟವರ್ಧನ್, ಡಾ.ನಿಧಿ ಪಟವರ್ಧನ್, ಕಾಂಚನಾ ಪಟವರ್ಧನ್, ಅನಿರುದ್ಧ ಎಸ್., ವೈದ್ಯರು ಹಾಗೂ ಸಿಬ್ಬಂದಿ ಇದ್ದರು. ಆಡಳಿತಾಧಿಕಾರಿ ಈರಯ್ಯ ಮಾಸ್ತಮಡರ್ ಸ್ವಾಗತಿಸಿದರು. ಆನಂದ ತುಪ್ಪದ ನಿರೂಪಿಸಿದರು. ಶಿವಶರಣ ಬೆಟ್ಟದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net