ಸೌಲಭ್ಯ ಸದುಪಯೋಗಪಡಿಸಿಕೊಳ್ಳಲಿ

15RAM2
Published on

ರಾಮದುರ್ಗ: ಅಂಗವಿಕಲ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ವಿವಿಧ ಸೌಲಭ್ಯ ನೀಡಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ಪಟ್ಟಣದ ವಿದ್ಯಾಚೇತನ ಶಾಲೆ ಆವರಣದಲ್ಲಿ ಅಂಗವಿಕಲ ಮಕ್ಕಳಿಗೆ ಶುಕ್ರವಾರ ವಿವಿಧ ಸಾಮಗ್ರಿ ವಿತರಿಸಿ ಮಾತನಾಡಿ, ಅಂಗವಿಕಲ ಮಕ್ಕಳ ಸೇವೆ ಅಮೂಲ್ಯವಾದುದು. ಅವರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸಾಧನ- ಸಲಕರಣೆ ವಿತರಿಸಲಾಗಿದೆ ಎಂದರು.

ಬಿಇಒ ಎಸ್.ಆರ್.ಕಾಂಬಳೆ, ಕ್ಷೇತ್ರ ಸಮನ್ವಯಾಧಿಕಾರಿ ಜೆ.ಸಿ.ಶೀಲವಂತಮಠ, ಕೆ.ವೈ.ಪಾಟೀಲ, ಜೆ.ಬಿ.ಲಮಾಣಿ, ಗೋಪಾಲ ಬಡಿಗೇರ, ಸುರೇಶ ಮಾದರ, ಬಿಆರ್‌ಪಿ ಐ.ಪಿ.ಮುಳ್ಳೂರ, ಸಂಪನ್ಮೂಲ ವ್ಯಕ್ತಿ ಎಸ್.ಎಂ.ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net