ಜನಪದ ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿ

ತುರ್ವಿಹಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನಪದ ಸಂಸ್ಕೃತಿ ಕಾರ್ಯಕ್ರಮವನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು.ಪ್ರಾಚಾರ್ಯ ಡಾ.ಕೆ.ಖಾದರ್‌ಬಾಷಾ, ಪಪಂ ಅಧ್ಯಕ್ಷ ಕೆ.ಶಾಮೀದ್ ಸಾಬ್, ಕಾರ್ಯದರ್ಶಿ ಡಾ.ವೆಂಕಟರಮಣ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ದೇವಿದಾಸ ಇತರರಿದ್ದರು.

Published on

ಸಿಂಧನೂರು: ಆಧುನಿಕ ಗುಂಗಿನಲ್ಲಿ ಯುವ ಪೀಳಿಗೆ ನಮ್ಮ ಸಂಸ್ಕೃತಿಯಿಂದ ದೂರವಾಗುತ್ತಿದೆ. ಜನಪದ ಈ ನೆಲದ ಸಂಸ್ಕೃತಿಯಾಗಿದ್ದು, ಯುವಕರಿಗೆ ತಿಳಿಸುವ ಕೆಲಸವಾಗಬೇಕಿದೆ ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ, ಸಾಂಸ್ಕೃತಿಕ ವಿಭಾಗ ಮತ್ತು ಎನ್ನೆಸ್ಸೆಸ್ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಜನಪದ ಸಂಸ್ಕೃತಿ-2025 ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಪದ ಬದುಕು ರೂಪಿಸುವ ಕಲೆಯಾಗಿದೆ. ಗ್ರಾಮೀಣ ಜೀವನವೇ ಅದ್ಭುತ ಸಂಸ್ಕೃತಿ. ಪ್ರತಿಯೊಂದು ಕೆಲಸದಲ್ಲೂ ಜನಪದ ಹಾಸು ಹೊಕ್ಕಾಗಿದೆ. ಕೇವಲ ಉತ್ಸವಕ್ಕಾಗಿ ಆಚರಣೆ ಬೇಡ. ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿ ಎಂದರು.

ಚಿಂತಕ ನಿರುಪಾದೆಪ್ಪ ಗುಡಿಹಾಳ ಮಾತನಾಡಿ, ಜನಪದ ತಾಯಿ ಬೇರಾಗಿದ್ದು, ಉಳಿಸಿ ಬೆಳೆಸಬೇಕು. ಜೀವನಕ್ಕೆ ತಂತ್ರಜ್ಞಾನ ಅನಿವಾರ್ಯವಾಗಿದ್ದರೂ ದೇಶೀಯ ಸಂಸ್ಕೃತಿ ಮರೆಯಬಾರದು ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಕೆ.ಖಾದರ್‌ಬಾಷಾ, ಪಪಂ ಅಧ್ಯಕ್ಷ ಕೆ.ಶಾಮೀದ್ ಸಾಬ್, ಕಾರ್ಯದರ್ಶಿ ಡಾ.ವೆಂಕಟರಮಣ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ದೇವಿದಾಸ, ಉಪನ್ಯಾಸಕರಾದ ಮೌಲಾಸಾಬ್, ನಳಿನಾ, ಪ್ರಮುಖರಾದ ಮಲ್ಲನಗೌಡ ದೇವರಮನಿ, ಬೀರಪ್ಪ ಶಂಭೋಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net