ಕಸ ಸಂಗ್ರಹ ವಿಷಯದಲ್ಲಿ ಮಾದರಿ ವಾರ್ಡ್ ಮಾಡೋಣ

h7-hasiru dala
Published on

ಹುಬ್ಬಳ್ಳಿ: ಹಸಿರು ದಳ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಇಲ್ಲಿಯ ವಾರ್ಡ್ ನಂ. 47ರಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ಕೊಡುವಂತೆ ಮನೆ ಮನೆಗೆ ತೆರಳಿ ಇತ್ತೀಚೆಗೆ ಜಾಗೃತಿ ಮೂಡಿಸಲಾಯಿತು.
ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬರೂ ಮೂಲ ಹಂತದಲ್ಲಿ ಕಸ ವಿಂಗಡಿಸಬೇಕು. ಪ್ರತ್ಯೇಕ ಕಸ ಸಂಗ್ರಹಿಸಲು ನಿತ್ಯ ಎರಡು ವಾಹನಗಳು ಓಡಾಡಲಿವೆ. ವಾರ್ಡ್ ನಂ. 47 ಮಾದರಿ ವಾರ್ಡ್ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡೋಣ. ಯಾರು ಪ್ರತ್ಯೇಕ ಕಸ ಸಂಗ್ರಹಿಸಿ ವಾಹನಕ್ಕೆ ಕೊಡುತ್ತಾರೋ ಅವರಿಗೆ ಅವರ ಮನೆಗೆ ‘ನಾನೂ ಕಸವನ್ನು ವಿಂಗಡಿಸಿ ಕೊಡುತ್ತೇನೆ’ ಎನ್ನುವ ಸ್ಟಿಕರ್ ಹಚ್ಚಲಾಗುವುದು. ಇದನ್ನು ಇನ್ನೊಬ್ಬರು ನೋಡಿ ಕಲಿಯುತ್ತಾರೆ ಎಂದರು.
ವಲಯ ಕಚೇರಿ ಆಯುಕ್ತ ಆನಂದ ಕಾಂಬಳೆ ಅವರು ಮಾತನಾಡಿ, ಮನೆ ಮನೆಯ ಕಸ ವಿಗಂಡನೆಗೆ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿಯಲಿದೆ. ಪ್ರತ್ಯೇಕ ವಾಹನಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿವಳಿಕೆ ನೀಡಿದರು.
ಹಸಿರು ದಳದ ವ್ಯವಸ್ಥಾಪಕರಾದ ಮಂಜುನಾಥ ಬಾರಕೇರ, ರಮೇಶ ಬೇವೂರ, ದೀಪ್ತಿ ಭಜಂತ್ರಿ, ಆರೋಗ್ಯ ನಿರೀಕ್ಷಕ ಫಜಲ್ ಬಗಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net