ಶಿಕ್ಷಕ ವೃತ್ತಿಯ ಗೌರವ ಉಳಿಸಿಕೊಳ್ಳಲಿ

ANK SANMAN
Published on

ಅಂಕೋಲಾ: ಕೇವಲ ಬದುಕಿನ ಅನಿವಾರ್ಯತೆಗೆ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡದೇ ವೃತ್ತಿಯ ಗೌರವವನ್ನು ಉಳಿಸಿಕೊಳ್ಳಬೇಕು. ಸಂಸ್ಕೃ ಸಂಸ್ಕಾರಗಳು ಶಿಕ್ಷಣದ ಜವಾಬ್ದಾರಿ ಆಗಿದ್ದು ಅದನ್ನು ಬೆಳೆಸುವ ಕಾರ್ಯ ಜತೆ ಶಿಕ್ಷಕರ ಭವಿಷ್ಯ ನಿರ್ಮಾಣ ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡಬೇಕು ಎಂದು ನಿವೃತ್ತ ಪ್ರಾಚಾರ್ಯ ಮಹೇಶ ಗೋಳಿಕಟ್ಟೆ ಹೇಳಿದರು.

ಸ್ಥಳೀಯ ಕೆಎಲ್​ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ರ್ಯಾಂಕ್ ವಿಜೇತರಿಗೆ ಸನ್ಮಾನ ಹಾಗೂ ಎನ್​ಎಸ್​ಎಸ್ ಘಟಕ ಹಾಗೂ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಕರ್ತವ್ಯಪ್ರಜ್ಞೆ, ಸಮಯಪ್ರಜ್ಞೆ ಹಾಗೂ ನಾಗರಿಕಪ್ರಜ್ಞೆ ಸೂಕ್ತ ಮಾರ್ಗದರ್ಶನ ನೀಡಿ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ದಾರಿದೀಪ ಆಗಬೇಕು ಎಂದರು.

ಕೆಎಲ್​ಇ ಸ್ಥಳೀಯ ಸಮೂಹ ಸಂಸ್ಥೆಯ ಸದಸ್ಯೆ ಡಾ.ಮೀನಲ್ ನಾರ್ವೆಕರ್ ಮಾತನಾಡಿ, ವಿದ್ಯಾರ್ಥಿ ಗಳು ಕಲಿತ ವಿದ್ಯಾಸಂಸ್ಥೆಯನ್ನು ಮರೆಯದೇ ಮಾನವೀಯತೆಯಿಂದ ನೆನೆಯುವ ಜತೆಯಲ್ಲಿ ಸಂಸ್ಥೆಯ ಬೆಳವಣಿಗೆಯ ರಾಯಭಾರಿಗಳಾಗಬೇಕು ಎಂದರು.

ರಂಜನಾ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ವಿನಾಯಕ ಜಿ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಡಾ.ಪುಷ್ಪಾ ನಾಯ್ಕ ಪರಿಚಯಿಸಿದರು, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಹಾಗೂ ಸಾಧಕ ಎನ್​ಎಸ್​ಎಸ್ ಅಧಿಕಾರಿಗಳಾದ ರಾಘವೇಂದ್ರ ಅಂಕೋಲೆಕರ ಸನ್ಮಾನ ಸ್ವೀಕರಿಸಿ, ವರದಿ ವಾಚಿಸಿದರು. ಕಾಲೇಜಿನ ರ್ಯಾಂಕ್ ವಿಜೇತ ವಿದ್ಯಾರ್ಥಿನಿಯರಾದ ಪಲ್ಲವಿ ಗಾವಡಿ, ತೃಪ್ತಿ ನಾಯ್ಕ, ಅರ್ಚನಾ ನಾಯ್ಕ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸನ್ಮಾನಿತರನ್ನು ಉಪನ್ಯಾಸಕ ಮಂಜುನಾಥ ಇಟಗಿ ಪರಿಚಯಿಸಿದರು. ಪ್ರಧಾನಕಾರ್ಯದರ್ಶಿ ಮಧುರಾ ಗೌಡ, ಕಾತ್ಯಾಯಿನಿ ನಾಯ್ಕ ಗಣೇಶ ಹಿರೇಮಠ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net