ದೇಶದ ಸಂಸ್ಕೃತಿ, ಸಂಪ್ರದಾಯಗಳಿಗಾಗಿ ಬದುಕೋಣ

12sirsi3hindusanghatanenews
Published on

ಶಿರಸಿ: ಹಿಂದುತ್ವದ ಭಾವನೆಗಳು ಜಾಗೃತರಾಗಿ ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಬೇಕು ಎಂದು ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಅಭಿಪ್ರಾಯಪಟ್ಟರು.


ಗುರುವಾರ ನಗರದ ವಿಕಾಸ ಆಶ್ರಮ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವ ಹಿಂದು ಪರಿಷತ್, ಬಜರಂಗದಳದ ಶೌರ್ಯ ಜಾಗರಣಾ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.


ಶೌರ್ಯ ಜಾಗರಣಾ ರಥಯಾತ್ರೆ ಇಡೀ ದೇಶಾದ್ಯಂತ ನಡೆಯುತ್ತಿದೆ. ಜಾತಿಯ ಮೋಹ ಸಮಾಜದಲ್ಲಿ ಹೆಚ್ಚಾಗುತ್ತಿದೆ. ಜಾತಿಯ ವ್ಯಾಮೋಹ ಸರಿಯಲ್ಲ. ನಾವೆಲ್ಲರೂ ಹಿಂದು ಎಂಬ ಭಾವನೆ ನಮ್ಮಲ್ಲಿ ಬರಬೇಕು. ಈ ದೇಶದ ಸಂಸ್ಕೃತಿ ಸಂಪ್ರದಾಯಗಳಿಗಾಗಿ ನಾವು ಬದುಕಬೇಕು. ನಮ್ಮ ಪೂರ್ವಜರ ಪರಾಕ್ರಮದಿಂದಾಗಿ ನಾವು ಇನ್ನೂ ಹಿಂದುಗಳಾಗಿದ್ದೇವೆ. ಹಿಂದುಗಳು ಜಾಗೃತವಾದರೆ ಮಾತ್ರ ಹಿಂದು ಸಮಾಜ ಉಳಿಯಲು ಸಾಧ್ಯ ಎಂದರು.
ದೇಶದ ಯುವ ಶಕ್ತಿ ದಿಕ್ಕು ತಪ್ಪಿದರೆ ಇಡೀ ದೇಶವೇ ದಿಕ್ಕು ತಪ್ಪುತ್ತದೆ. ದೇಶದ ಇತಿಹಾಸವನ್ನು ಯುವ ಸಮಾಜಕ್ಕೆ ತಿಳಿಸಬೇಕಿದೆ. ಭಾರತದಲ್ಲಿ ಭಾರತೀಯತೆಯ ಶಿಕ್ಷಣ ನೀಡಬೇಕು. ಭಾರತದ ಶಿಕ್ಷಣ ನೀತಿ ಬದಲಾವಣೆಯಾಗಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಯಾಗಬೇಕು. ಧಾರ್ವಿುಕ ಗ್ರಂಥ ಸೇರಿದಂತೆ ನಮ್ಮ ದೇಶದ ನೈಜ ಇತಿಹಾಸವನ್ನು ತಿಳಿಸುವ ಶಿಕ್ಷಣ ನೀತಿ ಬರಬೇಕಿದೆ ಎಂದರು.


ಹೊನ್ನಾವರ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಪ್ರಮುಖರಾದ ಮಾಬ್ಲೇಶ್ವರ ಹೆಗಡೆ, ಎಸ್.ಎನ್. ಭಟ್, ಗಂಗಾಧರ ಭಟ್, ಅಮಿತ್ ಶೇಟ್, ಕೇಶವ ದೊಂಬೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net