ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳಲಿ

25 HDLP 01
ಹೂವಿನಹಡಗಲಿ ಕಾರ್ಮೆಲ್ ಸೇವಾ ಸದನದ ಬಾಲಯೇಸುವಿನ ದೇವಾಲಯದ ಆವರಣದಲ್ಲಿ ಕ್ರಿಸ್‌ಮಸ್ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಮನ್ವಯ ಕಾರ್ಯಕ್ರಮವನ್ನು ಅಸ್ಸಿಸಿ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ರೋಜಿಟಾ ಉದ್ಘಾಟಿಸಿದರು. ಪೀಠಾಧಿಪತಿ ಫಾದರ್ ಡೆನ್ಜಿಲ್ ವೇಗಸ್, ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಇತರರಿದ್ದರು.
Published on

ಹೂವಿನಹಡಗಲಿ: ಕ್ರಿಸ್‌ಮಸ್ ಶಾಂತಿ, ಸೌಹಾರ್ದತೆಯ ಸಂಕೇತವಾಗಿದೆ ಎಂದು ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಕಾರ್ಮೆಲ್ ಸೇವಾ ಸದನದ ಬಾಲಯೇಸುವಿನ ದೇವಾಲಯದ ಆವರಣದಲ್ಲಿ ಬುಧವಾರ ಕ್ರಿಸ್‌ಮಸ್ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಮನ್ವಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲರೂ ಸಮಾನರೆಂಬ ಮನೋಭಾವ ಸಾಮರಸ್ಯದ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ. ಕ್ರಿಸ್‌ಮಸ್ ಎಲ್ಲ ಧರ್ಮದವರು ಆಚರಿಸುತ್ತಾರೆ. ಮಾನವ ನಂಬಿಕೆಗಳ ವೈವಿಧ್ಯತೆ ಗೌರವಿಸುವ ನಡೆ ಎಲ್ಲರನ್ನೂ ಪ್ರೀತಿಸಲು ಕಲಿಸುತ್ತದೆ ಎಂದರು.

ಇಸ್ಲಾಂ ಧರ್ಮಗುರು ಹಜರತ್ ಮೌನಿ ಮೌಲಾನ ಮಾತನಾಡಿ, ಸರ್ವ ಧರ್ಮಗಳು ಶಾಂತಿ ಮಂತ್ರ ಹೇಳುತ್ತವೆ. ಸಮಾಜದಲ್ಲಿ ಎಲ್ಲರೂ ದೇವರ ಕಡೆಗೆ ನಡೆಯುತ್ತಾರೆ. ಶಾಂತಿ ಕಾಪಾಡಲು ಧರ್ಮ ಬಳಸಬೇಕೆ ಹೊರತು ಶಾಂತಿ ಕದಡಲಲ್ಲ ಎಂದು ಹೇಳಿದರು.

ಬಾಲಯೇಸುವಿನ ದೇವಾಲಯದ ಪೀಠಾಧಿಪತಿ ಫಾದರ್ ಡೆನ್ಜಿಲ್ ವೇಗಸ್, ಫಾದರ್ ವಿಜಯ್ ಡಿಕೋಸ್ತಾ, ಕಸಾಪ ಅಧ್ಯಕ್ಷ ಟಿ.ಪಿ.ವೀರೇಂದ್ರ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಎಚ್.ಎಂ.ವೀರೇಶ, ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿಚ್ಚುಗತ್ತಿ ಖಾಜಾ, ಅಸ್ಸಿಸಿ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ರೋಜಿಟಾ, ಮೌಂಟ್ ಕಾರ್ಮೆಲ್ ಶಾಲೆಯ ಪ್ರಾಚಾರ್ಯ ಫಾದರ್ ವಿಕ್ಟರ್ ವಿಜಯ್ ಪೈಸ್, ಫಾದರ್ ಪ್ರಕಾಶ್ ರೆಬೆಲ್ಲೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net