

ಕುವೆಂಪುನಗರದ ಕಲಾ ಸುರುಚಿ ಸಂಸ್ಥೆಯಲ್ಲಿ ಜು.22 ರಂದು ಸಂಜೆ 4.30ರಿಂದ 5.30ರವರೆಗೆ ಮಕ್ಕಳಿಗಾಗಿ ‘ಕಥೆ ಕೇಳೋಣ ಬನ್ನಿ-785’ ಕಾರ್ಯಕ್ರಮ ಆಯೋಜಿಸಲಾಗಿದೆ. ಐಡಿಯಲ್ ಜಾವಾ ರೋಟರಿ ಶಾಲೆಯ ಯೋಗ ಶಿಕ್ಷಕಿ ಜಿ.ಭಾವನಿ ಮಕ್ಕಳಿಗೆ ಕಥೆ ಹೇಳಲಿದ್ದಾರೆ.
ಶ್ರೀ ಜಯಚಾಮರಾಜ ಒಡೆಯರ್ ಸಂಸ್ಮರಣಾ ದಿನದ ಅಂಗವಾಗಿ ಶ್ರುತಿಮಂಜರಿ ಪ್ರತಿಷ್ಠಾನವು ಜು.22ರಂದು ಸಂಜೆ 6 ಗಂಟೆಗೆ ಸರಸ್ವತಿಪುರಂನ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿದೆ.
ಶ್ರೀ ಜಯಚಾಮರಾಜ ಒಡೆಯರ್ ಅವರ ಕೃತಿಗಳನ್ನಾಧರಿಸಿದ ಕರ್ನಾಟಕ ಶಾಸ್ತ್ರಿಯ ಗಾಯನ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ದಿಲೀಪ್ ಸಿಂಹ ಹಾಡಲಿದ್ದಾರೆ. ವಿದ್ವಾನ್ ಕೇಶವ್ ಮೋಹನ್‌ಕುಮಾರ್(ಪಿಟೀಲು), ವಿದ್ವಾನ್ ಎ.ರಾಧೇಶ್(ಮೃದಂಗ) ಸಾಥ್ ನೀಡಿಲಿದ್ದಾರೆ.