ಕನ್ನಡದೊಂದಿಗೆ ಇಂಗ್ಲಿಷ್ ಭಾಷೆ ಕಲಿಯಲಿ

oppo_0
ಮುತ್ತಿನ ಮುಳಸೋಗೆ ಶಾಲಾ ಮಕ್ಕಳಿಗೆ ಸುಲಭವಾಗಿ ಇಂಗ್ಲಿಷ್ ಕಲಿಯುವ ಪುಸ್ತಕಗಳನ್ನು ರೋಟರಿ ಮಿಡ್‌ಟೌನ್ ಅಧ್ಯಕ್ಷ ಎಂ.ಎಂ. ರಾಜೇಗೌಡ ವಿದ್ಯಾರ್ಥಿಗಳಿಗೆ ವಿತರಿಸಿದರು. ಸತ್ಯನಾರಾಯಣ, ಜಗನ್, ಬಸವಗೌಡ ಇತರರಿದ್ದರು.
Published on

ಬೈಲಕುಪ್ಪೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮಾತೃಭಾಷೆ ಕನ್ನಡ ಕಲಿಕೆಯ ಜತೆಗೆ ಇಂಗ್ಲಿಷ್ ಕಲಿತರೆ ಜ್ಞಾನ ಸಂಪಾದಿಸಿಕೊಳ್ಳಬಹುದು ಎಂದು ತಾಲೂಕಿನ ರೋಟರಿ ಮಿಟ್ ಟೌನ್ ಅಧ್ಯಕ್ಷ ಎಂ.ಎಂ.ರಾಜೇಗೌಡ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಮುತ್ತಿನ ಮುಳಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇತ್ತೀಚೆಗೆ ತಾಲೂಕು ರೋಟರಿ ಮಿಟ್ ಟೌನ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮಾತೃಭಾಷೆ ಕನ್ನಡದ ಜತೆಗೆ ಇಂಗ್ಲಿಷ್ ಕಲಿತರೆ ವಿವಿಧ ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಸುಲಭವಾಗಿ ವಿದ್ಯಾರ್ಥಿಗಳು ಗೆಲ್ಲಬಹುದು ಎಂದು ತಿಳಿಸಿದರು.

ತಾಲೂಕು ಸಂಘದ ಸದಸ್ಯ ಸತ್ಯನಾರಾಯಣ ಅವರು ಇಂಗ್ಲಿಷ್ ಸುಲಭವಾಗಿ ಕಲಿಯುವ ಪುಸ್ತಕ ಮತ್ತು 5ನೇ ತರಗತಿಯಿಂದ 10ನೇ ತರಗತಿಯರವರಿಗೆ ಸುಲಭವಾಗಿ ಕಲಿಯುವ ಗಣಿತ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಅಲ್ಲದೆ ಶಾಲೆಗೆ ಕಸದ ಬುಟ್ಟಿಯನ್ನು ನೀಡಲಾಯಿತು.

ತಾಲೂಕು ರೋಟರಿ ಮಿಡ್‌ಟೌನ್ ಕಾರ್ಯದರ್ಶಿ ಐ.ಕೆ.ಪಿ.ಹೆಗಡೆ, ಸದಸ್ಯರಾದ ಬಸವೇಗೌಡ, ಹರೀಶ್, ಜಗನ್, ಮಹದೇವಪ್ಪ, ಸುನಿಲ್, ಪ್ರಕಾಶ್, ಶಾಲೆಯ ಮುಖ್ಯಶಿಕ್ಷಕ ಶಿವಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ವೀರಭದ್ರ, ಶಿಕ್ಷಕಿ ಜ್ಯೋತಿ, ಶಾಲಾ ಮಕ್ಕಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net