ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲಿ

15Rayabag1
Published on

ರಾಯಬಾಗ: ಪರಿಶಿಷ್ಟರ ಕಾಲನಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡುವ ಮೂಲಕ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಚಿಂಚಲಿ ಪಟ್ಟಣದ ಅಜಿತ್ ನಗರ ಹಾಗೂ ಭಿರಡಿ ಗ್ರಾಮದ ಪರಿಶಿಷ್ಟ ಜಾತಿ ಜನಪ್ರದೇಶದಲ್ಲಿ ಜಿಪಂ ಇಲಾಖೆಯ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ಮಂಜೂರಾದ 1 ಕೋಟಿ ರೂ. ಅನುದಾನದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.

ಅಂಕುಶ ಜಾಧವ, ಸದಾಶಿವ ಘೋರ್ಪಡೆ, ಮಹಾದೇವ ಬೋರಗಾಂವ, ರಮೇಶ ಹಾರೂಗೇರಿ, ಲಕ್ಷ್ಮಣ ತುಳಸಿಗೇರಿ, ಸುಭಾಷ ಕೋರೆ, ರಾಜು ಮಹೇಶ್ವರಿ, ಮುರುಗೇಶ ನಿಶಾನದಾರ, ರಾಮಚಂದ್ರ ಮೈಶಾಳೆ, ಕಲ್ಮೇಶ ನಿಡವಣಿ, ಕೆಂಪಣ್ಣ ಮೈಶಾಳೆ, ಮಹಾದೇವ ಜೋಗಿ, ರಾಜು ಪೋಳ, ವಿಲಾಸ ಬಸನಾಯ್ಕ, ಸಹದೇವ ಯಡ್ರಾವಿ, ಕುಮಾರ ಖೋತ, ಬಾಹುಬಲಿ ಹಂಡೆಗೆ, ವಸಂತ ಕರಾಕಾಯಿ, ಕಿರಣ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net